ಕೆ.ಎಚ್.ಮುನಿಯಪ್ಪನವರಿಗೆ ಪ್ರಬಲ ಖಾತೆ ನೀಡಿ: ಬಸ್ಸು ಮಾದರ
Give K.H. Muniyappa a strong portfolio: Bussu Madara
ತಾಳಿಕೋಟಿ 06 : ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಸುಮಾರು 45 ರಿಂದ 50 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸುಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು ಸಚಿವರು ನಮ್ಮ ಸಮುದಾಯದ ಹಿರಿಯ ನಾಯಕರಾಗಿದ್ದು ಸಚಿವರಿಗೆ ಅಪಾರ ಅನುಭವ, ಆಡಳಿತ ಸಾಮರ್ಥ್ಯ ಮತ್ತು ಜನಪ್ರಿಯ ಸೇವೆಯನ್ನು ಪರಿಗಣಿಸದೆ ಕಡಿಮೆ ಪ್ರಾಮುಖ್ಯತೆ ಹೊಂದಿರುವ ಖಾತೆ ನೀಡಿರುವುದು ನಮ್ಮ ಸಮುದಾಯದ ಜನರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷರಾದ ಬಸ್ಸು ಈ ಕಟ್ಟಿಮನಿ (ಮಾದರ) ಅವರು ಅಸಮಾಧಾನ ವ್ಯಕ್ತಪಡಿಸಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ವಿಜಯಪುರ ಘಟಕದ ವತಿಯಿಂದ ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿದರು.ಸಮಾಜದ ಮುಖಂಡರಾದ ಶೇಖಪ್ಪ ಚಬನೂರ ಮಾತನಾಡಿ ರಾಜ್ಯದ ಅಭಿವೃದ್ಧಿ ಹಾಗೂ ಜನ ಸೇವೆಯಲ್ಲಿ ಮಹತ್ತರ ಕೊಡುಗೆ ನೀಡಿರುವ ಸಚಿವರಿಗೆ ಅವರ ಅನುಭವಕ್ಕೆ ತಕ್ಕಂತಹ ಪ್ರಬಲ ಮತ್ತು ಪ್ರಮುಖ ಖಾತೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಬಿಎಸ್‌ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣದ ತಾಲೂಕ ಅಧ್ಯಕ್ಷ ರಮೇಶ ದೊಡಮನಿ ಸಾಸ್ನೂರ ಮಾತನಾಡಿಸಚಿವರು ಐದು ದಶಕಗಳಿಂದ ಪಕ್ಷದ ಸಂಘಟನೆ ಬಲಪಡಿಸಲು ಸಮಾಜದ ಅಭಿವೃದ್ಧಿಗೆ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ ಇಂತಹ ಹಿರಿಯ ಮತ್ತು ಅನುಭವಿ ನಾಯಕರಿಗೆ ಹೆಚ್ಚಿನ ಪ್ರಬಲ ಖಾತೆ ನೀಡುವುದರಿಂದ ಸರಕಾರದ ಆಡಳಿತ ಸುಧಾರಣೆ ಆಗುತ್ತದೆ ಆದ ಕಾರಣ ಪ್ರಬಲ ಖಾತೆ ನೀಡಬೇಕೆಂದು ಹೇಳಿದರು. ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ್ ಕಟ್ಟಿಮನಿ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಸಚಿವರ ಅನುಭವ ಮತ್ತು ಹಿರಿಯತೆಯನ್ನು ಪರಿಗಣಿಸಿ ಅವರಿಗೆ ಪ್ರಮುಖ ಮತ್ತು ಪ್ರಭಾವಿ ಖಾತೆ ಮರು ಹಂಚಿಕೆ ಮಾಡಬೇಕೆಂದು ಹೇಳಿರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮಾದಿಗ ಸಮುದಾಯದ ಮುಖಂಡರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿಂದ ಸಾಮೂಹಿಕವಾಗಿ ಹೊರ ನಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಂಬೇಡ್ಕರ್ ಸೇನೆ ತಾಲೂಕು ಉಪಾಧ್ಯಕ್ಷ ಮಾದೇವ ಚಟ್ನಳ್ಳಿ. ಡಿ ಎಸ್ ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ್ಣದ ತಾಲೂಕು ಕಾರ್ಯದರ್ಶಿ ಶಂಕ್ರ್ಪ ದೊಡಮನಿ (ಸಾಸನೂರ),ಶರಣಪ್ಪ ಹರನಾಳ,ದೇವಪ್ಪ ತುಂಬಿಗಿ, ಬಸವರಾಜ ಸಾಸನೂರ, ಈರಣ್ಣ ಪತ್ತೆಪುರ್, ಬಾಗಪ್ಪ ಬಿಳೆಭಾವಿ ಹಾಗೂ ಕರ್ನಾಟಕ ಮಾದರ ಮಹಾಸಭಾ ಮುಖಂಡರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 