ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ

ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ General meeting of all members of the Government Employees Association

ಲೋಕದರ್ಶನ ವರದಿ

ಕೊಪ್ಪಳ  30: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ  ಕೊಪ್ಪಳದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜರುಗಿತು.  2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ವಾಚಿಸಿದರೆ, ಜಿಲ್ಲಾ ಖಚಾಂಚಿ ಜಯತೀರ್ಥ ದೇಸಾಯಿ 2025-26 ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ  ಸರ್ವಸದಸ್ಯರು  ಚಪ್ಪಾಳೆ ತಟ್ಟುವ ಮೂಲಕ ಅನುಮೋದನೆ ನೀಡಿದರು.  

ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕರಿಗಳಾದ  ಹೇಮಣ್ಣ ಕವಲೂರ, ಮಂಜುನಾಥ ಎನ್‌.  ಪದಾಧಿಕಾರಿಗಳಾದ ಗೋಪಾಲಕೃಷ್ಣ ಮುಂಡರಗಿ,  ಸುರೇಶ , ಆಸೀಫ್ ಅಲಿ, ಪ್ರಾಣೇಶ ಪೂಜಾರ,   ರೇಣುಕಾ, ಡಾ.ಕವಿತಾ ಹ್ಯಾಟಿ, ಕನಕಗಿರಿ ತಾಲೂಕ ಅಧ್ಯಕ್ಷೆ ಶಂಶಾದ ಬೇಗಂ, ಗಂಗಾವತಿ ತಾಲೂಕ ಅಧ್ಯಕ್ಷ ಶಿವಶಂಕರ ಕಲ್ಮಠ, ಕಾರಟಗಿ ತಾಲೂಕ ಅಧ್ಯಕ್ಷ ಹನುಮಂತಪ್ಪ ನಾಯಕ, ಕುಷ್ಟಗಿ ತಾಲೂಕ ಅಧ್ಯಕ್ಷ ಶ್ರೀನುವಾಸ ನಾಯಕ, ಯಲಬುರ್ಗಾ ತಾಲೂಕ. ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ಕುಕನೂರು ತಾಲೂಕ ಅಧ್ಯಕ್ಷ ಮಹೇಶ ಶಬರದ, ಮುನಿರಾಬಾದ ಯೋಜನಾ ಘಟಕದ ಅಧ್ಯಕ್ಷ ಬಸಪ್ಪನಾಯಕ, ಸೇರಿದಂತೆ ರಾಜ್ಯ, ಜಿಲ್ಲಾ, ತಾಲೂಕ ಘಟಕಗಳ ಪದಾಧಿಕಾರಿಗಳು  ಉಪಸ್ಥಿತರಿದ್ದರು.  ಶಿವಪ್ಪ ಜೋಗಿ ನಿರೂಪಿಸಿದರು. ನಾಗರಾಜನಾಯಕ ಡಿ.ಡೊಳ್ಳಿನ ವಂದಿಸಿದರು.