ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡಿದ್ದಲ್ಲಿ ರೂ. 200 ಬದಲು ರೂ. 1000 ದಂಡ

ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡಿದ್ದಲ್ಲಿ ರೂ. 200 ಬದಲು ರೂ. 1000 ದಂಡ  Fine for using tobacco products in public areas will be Rs. 1000 instead of Rs. 200.

ಲೋಕದರ್ಶನ ವರದಿ 

ಧಾರವಾಡ 30 : ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹಿರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024 ರಲ್ಲಿ 21 ರ ಅಡಿ ಕಲಂ 4 ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ನಿಷೇಧಿಸಲಾಗಿದೆ. ಯಾರೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನವನ್ನು ಬಳಸತಕ್ಕದ್ದಲ್ಲ.

ಬಳಿಸಿದ್ದಲ್ಲಿ ಎರಡು ನೂರು ರೂಪಾಯಿಗಳವರೆಗೆ ಇದ್ದ ದಂಡ (ಜುಲ್ಮಾನೆಯ)ದ ಬದಲಾಗಿ ಒಂದು ಸಾವಿರ ರೂಪಾಯಿಗಳವರೆಗೆ ದಂಡ (ಜುಲ್ಮಾನೆ) ವನ್ನು ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, 21 ಎ ರ ಆಡಿ ಕಲಂ 4ಎ (ಹುಕ್ಕಾ ಬಾರ್ ನಡೆಸುವುದಕ್ಕಾಗಿ ದಂಡನೆ) ಪ್ರರಕಣದ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಪ್ತಿಯು, ಒಂದು ವರ್ಷಕ್ಕೆ ಕಡಿಮೆಯಿಲ್ಲದ ಆದರೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಗೆ ಕಾರಗೃಹ ವಾಸ  ಮತ್ತು 50 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿಲ್ಲದ ಆದರೆ 01 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ (ಜುಲ್ಮಾನೆ) ವನ್ನು ವಿಧಿಸಲಾಗುತ್ತದೆ.  

24 ರ ಆಡಿ ಕಲಂ 6ಎ ರಲ್ಲಿ ತಿಳಿಸಿರುವಂತೆ, ಇಪ್ಪತ್ತೊಂದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಸಿಗರೇಟು ಅಥವಾ ಇತರೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧವಿದೆ. ಯಾರೇ ವ್ಯಕ್ತಿಯು ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೇ ವ್ಯಕ್ತಿಗೆ, ಯಾವುದೇ ಶಿಕ್ಷಣ ಸಂಸ್ಥೆಯ ಒಂದು ನೂರು ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ ಅಥವಾ ಬಿಡಿಯಾಗಿ ಅಥವಾ ಒಂಟಿ ಕಟ್ಟಿಯಾಗಿ ಸಿಗರೇಟು ಅಥವಾ ಯವುದೇ ಇತರ ತಂಬಾಕು ಉತ್ಪನ್ನದ ಮಾರಾಟ ಮಾಡತಕ್ಕದ್ದಲ್ಲ. ಮತ್ತು ಮಾರಾಟಕ್ಕೆ ಇಡತಕ್ಕದ್ದಲ್ಲ ಅಥವಾ ಮಾರಾಟಕ್ಕೆ ಅನುಮತಿ ನೀಡತಕ್ಕದ್ದಲ್ಲ. ಉಲ್ಲಂಘನೆಯಾದಲ್ಲಿ ಒಂದು ಸಾವಿರ ರೂಪಾಯಿಗಳವರೆಗೆ ದಂಡ (ಜುಲ್ಮಾನೆ) ವನ್ನು ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.