ಮಕ್ಕಳಿಗೆ ಶಿಕ್ಷಣ ಕೊಡಿ, ಭವಿಷ್ಯಕ್ಕೆ ದಾರಿ ತೆರೆಸಿ:ಮರಿಯೋಜಿರಾವ್
Educate children, pave the way for the future: Marioji Rao
ಮುಂಡಗೋಡ 30 : ರಾಜ್ಯ ಅನ್ನದಾತ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಗುರುವಾರ ಪಟ್ಟಣದ ವಿವೇಕಾನಂದ ಬಯಲು ಮಂಟಪದಲ್ಲಿ ಬಸವೇಶ್ವರ, ಛತ್ರಪತಿ ಶಿವಾಜಿ, ಅಂಬೇಡ್ಕರ ಹಾಗೂ ಜಗಜೀವನರಾಮ್ ಜಯಂತ್ಯುತ್ಸವ ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು. ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಸವೇಶ್ವರ, ಛತ್ರಪತಿ ಶಿವಾಜಿ, ಅಂಬೇಡ್ಕರ ಹಾಗೂ ಜಗಜೀವನರಾಮ್ ರವರು ಸಮಾಜಕ್ಕೆ ನೀಡಿದ ಕೊಡಗೆಗಳ ಕುರಿತು ಸವಿವರವಾಗಿ ಹೇಳಿ ಪ್ರತಿಯೊಬ್ಬರು ಸಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಜನರು ಅಭಿವೃದ್ಧಿ ಹೊಂದಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ ಹೇಳಿರುವಂತೆ ಶಿಕ್ಷಣವಂತರಾಗಬೇಕು ಮಕ್ಕಳನ್ನು ಶಿಕ್ಷಣ ಪಡೆಯುವಂತೆ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕಾ ಮರಾಠ ಸಮುದಾಯ ಪ್ರಭಾವಿ ಮುಖಂಡ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ್ ಮಾತನಾಡಿ ಸರ್ಕಾರ ನೀಡಿದ ಅನುದಾನ ಸದ್ಭಳಕೆಯಾಗಬೇಕು ಯಾವ ಯೋಜನೆಗೆ ಕೊಟ್ಟಂತಹ ಅನುದಾನ ಅದಕ್ಕೆನೇ ಬಳಕೆಯಾಗಬೇಕು ಹಾಗೂ ಎಸ್.ಸಿ. ಹಾಗೂ ಎಸ್ಟಿ ಅನುದಾನ ಸರ್ಕಾರ ದುರ್ಭಳಕೆ ಮಾಡಿದ ಕುರಿತು ನಿವೇಲ್ಲರು ಪ್ರಶ್ನಿಸಬೇಕು ಎಂದು ರೈತರಿಗೆ ಅನುಕೂಲವಾಗುವಂತಿದ್ದರೆ ತಮ್ಮೊಂದಿಗೆ ನಾನು ಹೋರಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು ವಿಜಯಕುಮಾರ ಭೊಸಲೆ ಮಾತನಾಡಿ ಬಸವೇಶ್ವರ, ಛತ್ರಪತಿ ಶಿವಾಜಿ, ಅಂಬೇಡ್ಕರ ಹಾಗೂ ಜಗಜೀವನರಾಮ್ ನಾಲ್ಕು ಮಹನಿಯರ ಜಯಂತ್ಯುತ್ಸವ ಆಚರಣೆ ಒಂದೇ ವೇದಿಕೆಯಲ್ಲಿ ಆಚರಣೆ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಪ್ರಮುಖರಿಗೆ ಹಾಗೂ ಸಾಧಕರಿಗೆ ಸೇರಿದಂತೆ 30 ಕ್ಕಿಂತ ಅಧಿಕ ಪ್ರಮುಖರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅನ್ನದಾತ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಅಧ್ಯಕ್ಷ ಚಿದಾನಂದ ಹರಿಜನ, ಜಿಲ್ಲಾಧ್ಯಕ್ಷ ಸೋಮಲಿಂಗಪ್ಪ ಬೆಣ್ಣಿ, ಎನ್.ಡಿ.ಕಿತ್ತೂರ, ಪ್ರಶಾಂತ ಕರಿಗಾರ, ಪಿ.ಜಿ.ಪಾಟೀಲ್ ಮಾರ್ಟಿನ್, ಮಂಜುನಾಥ ಹರ್ಜಿ ಮುಂತಾದವರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘಟನೆಯ ಕಾನೂನು ಸಲಹೆಗಾರ ಅಮರೇಶ ಚಿದಾನಂದ ಮಾಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 