ಎಫ್.ಐ.ಡಿ ಕಡ್ಡಾಯದ ವಿರುದ್ದ ಹೋರಾಟ ಅನಿವಾರ್ಯ : ಬಸಲಿಂಗಪ್ಪ
Fight against FID mandatory is inevitable: Basalingappa
ಲೋಕದರ್ಶನ ವರದಿ
ಶಿಗ್ಗಾವಿ 30: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಪೂರೈಕೆ ಹಾಗೂ ವಿತರಣೆಯನ್ನ ಸುಗಮಗೊಳಿಸಲು ರೈತರಿಗೆ ಎಫ್.ಐ.ಡಿಯನ್ನ ಕಡ್ಡಾಯ ಮಾಡಿರುವುದನ್ನ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಇದೇ ಮೇ. 2 ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲೂಕಾದ್ಯಕ್ಷ ಬಸಲಿಂಗಪ್ಪ ನರಗುಂದ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್.ಐ.ಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗುವುದಿಲ್ಲ, ಸರ್ವರ್ ಸಮಸ್ಯೆಯಾಗಿ ವಿಳಂಬವಾಗುವ ಬೀತಿ ರೈತರಿಗೆ ಕಾಡುತ್ತದೆ, ರಸಗೊಬ್ಬರ ಮಾರಾಟಗಾರರೂ ಸಹಿತ ರಾಜ್ಯಾದ್ಯಂತ ಇದನ್ನ ವಿರೋಧಿಸಿದ್ದಾರೆ, ವಿತರಿಸಲು ತಾಂತ್ರಿಕ ದೋಷ ಸಂಬವವಿದೆ ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರವನ್ನ ವಿತರಿಸಬೇಕು ಎಂದು ಅಗ್ರಹಿಸಿದರು, ಒಂದು ವೇಳೆ ಎಫ್.ಐ.ಡಿ ಕಡ್ಡಾಯವನ್ನ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾದ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರದ ಜೊತೆ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಇದನ್ನ ಕೂಡಲೇ ಸರಕಾರ ರಸಗೊಬ್ಬರ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಎಫ್.ಐ.ಡಿ ಕಡ್ಡಾಯ ಕಾನೂನು ಅವೈಜ್ಞಾನಿಕವಾಗಿರುವುದರಿಂದ ರೈತರಿಗೆ ಇದು ಮಾರಕವಾಗಲಿದ್ದು ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಈರಣ್ಣ ಸಮಗೊಂಡ, ರಮೇಶ ಜೋಳದ, ನಿಂಗಪ್ಪ ಓಲೇಕಾರ, ಸೇರಿದಂತೆ ರೈತ ಮುಖಂಡರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 