ಹೂವಿನ ಹಡಗಲಿ

ಗವಿಸಿದ್ದೇಶ್ವರ ಜಾತ್ರೆ :ಕುಂಭೋತ್ಸವ ಮೆರವಣಿಗೆ

ಗವಿಸಿದ್ದೇಶ್ವರ ಜಾತ್ರೆ :ಕುಂಭೋತ್ಸವ ಮೆರವಣಿಗೆ

ಲೋಕದರ್ಶನ ವರದಿ

ಹೂವಿನಹಡಗಲಿ10: ಪಟ್ಟಣದ ಗವಿಸಿದ್ದೇಶ್ವರ ಜಾತ್ರೆಯ ನಿಮಿತ್ತ ಲಿಂ.ಲಿಂಗೇಶ್ವರ ಸ್ವಾಮೀಜಿಯವರ ಭಾವಚಿತ್ರ ಮೆರವಣಿಗೆಯಲ್ಲಿ ಮಹಿಳೆಯರಿಂದ ಕುಂಭೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು.

ಪಟ್ಟಣದ ಮಲ್ಲಿಕಾರ್ಜುನ ದೇಗುಲದಿಂದ ಕುಂಭೋತ್ಸವ,ಕಳಶ ಮೆರವಣಿಗೆ .ಮಂಗಳ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶ್ರೀಮಠ ತಲುಪಿತು. ತಾಲೂಕಿನ ವಿನೋಬನಗರ ಹಾಗೂ ಮೀರಾಕೊರನಹಳ್ಳಿ ಹಾಗೂ ಪಟ್ಟಣದ ಭಕ್ತರು ಸೇವೆಯಿಂದ ನೂತನ ಗವಿಸಿದ್ದೇಶ್ವರ ಸ್ವಾಮಿ ಪಲ್ಲಕ್ಕಿ ಸೇವೆ ಮಾಡಲಾಯಿತು. ಮೆರವಣಿಗೆಗೆ ಕೇರಳದ ಚಂಡಿ ವಾಧ್ಯಮೇಳದ ತಾಳಕ್ಕೆ ನೃತ್ಯ ಎಲ್ಲರ ಗಮನ ಸೆಳೆಯಿತು.

ಕುಂಭೋತ್ಸವದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರಸ್ವಾಮೀಜಿ ಇದ್ದರು. ಗವಿಸಿದ್ದೇಶ್ವರ ಉತ್ಸವ ಮೂತರ್ಿಯನ್ನು ಎತ್ತುಗಳ ಮೆರವಣಿಗೆ ಮೂಲಕ ಜ್ಯೋತಿ ಶಾಂತಮ್ಮ ಇವರ ಮನೆಯಿಂದ ಹಾಗೂ ಕೋಟೆ ಪ್ರದೇಶದ ಸಕಲ ಭಕ್ತರಿಂದ ಶ್ರೀಮಠಕ್ಕೆ ತರಲಾಯಿತು.



ಸುದ್ದಿ ಓದಿ