ಉಚಿತ ಆರೋಗ್ಯ ಶಿಬಿರ ಬಡವರಿಗೆ ವರದಾನ
ಹೂವಿನಹಡಗಲಿ 02: ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಗವಿಮಠದ ಡಾ.ಹಿರಿಶಾಂತವೀರಸ್ವಾಮಿ ಹೇಳಿದರು.ಇಲ್ಲಿನ ಗವಿಮಠದ ಶಾಂತವೀರ ಸಮುದಾಯ ಭವನದಲ್ಲಿ ಭಾನುವಾರ ಉಚಿತ ಆರೋಗ್ಯ ಶಿಬಿರದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ, ಓಷಧೋಪಚಾರ, ಆರೋಗ್ಯ ಅರಿವು ದೊರೆಯುತ್ತದೆ.ಸಮಾಜದ ಸಮಗ್ರ ಆರೋಗ್ಯ ಸುಧಾರಣೆಗೆ ಆರೋಗ್ಯ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಶ್ರೀಮತಿ ಶಕುಂತಲಮ್ಮ ಯಂಕೋಬ ಶ್ರೇಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಾರಾಯಣ ಹೆಲ್ತ್, ಶಂಕರ, ಕಣ್ಣಿನ ಆಸ್ಪತ್ರೆ, ಫೆಡರೇಶನ್ ಭಾರತೀಯ ವ್ಯೆದ್ಯಕೀಯ ಸಂಘ,ಇಲ್ಲಿನ ಎಸ್‌ಎಂಎನ್ ಫೌಂಡೇಶನ್, ಎಸ್.ಎಸ್. ನಾರಾಯಣ ಹೆಲ್ತ್ ಕೇರ್ ದಾವಣಗೆರೆ, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಎಸ್.ಎಸ್. ಕೇರ್ ಟ್ರಸ್ಟ್ (ಬಾಪೂಜಿ ದಂತ ಚಿಕಿತ್ಸಾ ಕೇಂದ್ರ) ದಾವಣಗೆರೆ, ತಾಲೂಕ ವೈದ್ಯಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಜರುಗಿತು.ವೈದ್ಯರಾದ ಧರ್ಮಣ್ಣ, ರಾಮಣ್ಣ ಶ್ರೇಷ್ಠಿ, ವೀರೇಶ ಹೆಚ್ ಎಂ, ಆನಂದ, ಪ್ರಕಾಶ ಅಟವಾಳಗಿ, ಸೋಮಶೇಖರ್, ಉಮೇಶ್ ಜೆ.ಡಿ,ರಾಕೇಶ್ ತಿಲಕ್, ಶುಶಾಂತ್ ಮತ್ತು ಎಸ್ ಎಂ ಎನ್ ಶಿವರಾಜ,ಅಮರೇಶ ಶ್ರೇಷ್ಠಿ, ಎಸ್ ಎಂ ಎನ್ ಅಶೋಕ, ರವೀಂದ್ರ ಶ್ರೇಷ್ಠಿ ಇದ್ದರು.ಶಿಬಿರದಲ್ಲಿ 600 ಕ್ಕೂ ಹೆಚ್ಚು ಜನರು ಆರೋಗ್ಯದ ಶಿಬಿರದ ಪ್ರಯೋಜನ ಪಡೆದರು.ಶಿಕ್ಷಕರಾದ ವಿಶ್ವನಾಥ, ಹೆಚ್ ಬಿ ರಾಜಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು.