ಹೂವಿನ ಹಡಗಲಿ

ಹಡಗಲಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಹಡಗಲಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಲೋಕದರ್ಶನ ವರದಿ 

ಹೂವಿನಹಡಗಲಿ 14: ಪಟ್ಟಣದ ರಾಮದೇವರ ದೇವಸ್ಥಾನದ ಬಳಿ ಇಲ್ಲಿನ ರಾಮ ಸನ್ಮಂಗಳಂ ಟ್ರಸ್ಟ್‌ ವತಿಯಿಂದ ದಾವಣಗೆರೆ ನಯನ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು. 

ಪಟ್ಟಣದ ನೂರಾರು ಜನ ಬೆಳಿಗ್ಗೆಯಿಂದ ಸಾಲುಗಟ್ಟಿ ನಿಂತು 150ಜನ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ದಾವಣಗೆರೆ ನಯನ ಕಣ್ಣಿನ ಆಸ್ಪತ್ರೆ ತಂಡದವರು ಜನರ ಆರೋಗ್ಯ ತಪಾಸಣೆ ನಡೆಸಿ,ಓಷಧೋಪಚಾರ ನೀಡಿದರು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ, 50ಜನ ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳವರಿಗೆ ಆಸ್ಪತ್ರೆಗೆ ಬರಲು ಹೇಳಿದರು.  

ಕಾರ‌್ಯಕ್ರಮ ಉದ್ಘಾಟಿಸಿದ ನಯನ ಆಸ್ಪತ್ರೆಯ ವೈದ್ಯಾರಾದ ಡಾ.ವಸುದೇಂದ್ರ ಎನ್‌. ಮಾತನಾಡಿ ಇಂದಿನ ಒತ್ತಡ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಾಲ್ಲ ಒಮದು ವೈಪರೀತ್ಯ ಕಾಣುತ್ತಿದ್ದೇವೆ.ಪ್ರತಿಯೊಬ್ಬರು 2-3ತಿಂಗಳಿಗೆ ಒಂದು ಬಾರಿ ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. 

ಈ ಶಿಬಿರದಲ್ಲಿ ರಾಮಸ್ವಾಮಿ ದೇಗುಲದ ಧರ್ಮದರ್ಶಿ ಡಾ.ರಾಖೇಶಯ್ಯ, ಡಾ.ಧರ್ಮಣ್ಣ, ಡಾ.ಜಂಬಣ್ಣ, ಡಾ.ಫಣಿರಾಜ, ಶಿವರಾಜ ಬಿ, ನೇತ್ರಾಧಿಕಾರಿಗಳಾದ ಆರ್‌.ಚೈತನ್ಯ, ಟಿ.ಕೃಷ್ಣಮೂರ್ತಿ ಇದ್ದರು. 


ಸುದ್ದಿ ಓದಿ