ಹೂವಿನ ಹಡಗಲಿ

ಕಾರ್ಮಿಕರಿಗೆ ವೇತನ, ಉದ್ಯೋಗ ರಕ್ಷಣೆಗೆ ಕ್ರಮಕೈಗೊಳ್ಳಲು ಒತ್ತಾಯ

ಕಾರ್ಮಿಕರಿಗೆ ವೇತನ, ಉದ್ಯೋಗ ರಕ್ಷಣೆಗೆ ಕ್ರಮಕೈಗೊಳ್ಳಲು ಒತ್ತಾಯ

ಹೂವಿನಹಡಗಲಿ 17: ಕೋವಿಡ್ ಸೋಂಕು ಮತ್ತು ನಿರ್ಬಂಧದ ಕ್ರಮದಿಂದ ದುಡಿಯುವ ಕಾಮರ್ಿಕರಿಗೆ ಮೇಲೆ ದುಷ್ಟರಿಣಾಮ ಬೀರಿದ್ದು,ಲಾಕ್ ಡೌನ್ ಅವಧಿಯಲ್ಲಿ ಕಾಮರ್ಿಕರಿಗೆ ವೇತನ ಹಾಗೂ ಉದ್ಯೋಗ ರಕ್ಷಣೆಗೆ ಸಕರ್ಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಿಪಿಐ ಪಕ್ಷದ ಮುಖಂಡರು ಒತ್ತಾಯಿಸಿದರು.ಇಲ್ಲಿನ ತಾ.ಪಂ.ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು. ಸುರೇಶ ಹಲಗಿ ಮಾತನಾಡಿ ಈಗಾಗಲೇ ಕೊರೊನಾ 3ನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿರುವುದರಿಂದ ಸಕರ್ಾರ ಕೂಡಲೇ ಉಚಿತ ಹಾಗೂ ಸಾರ್ವತ್ರಿಕ ಲಸಿಕೆ ಹಾಕಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಸೋಂಕು ವಲಯಗಳಲ್ಲಿ ಸೋಂಕಿತರೊಂದಿಗೆ ಮುಖಾ ಮುಖಿ ಕೆಲಸ ಮಾಡುತ್ತಿದ್ದಾರೆ ಕನಿಷ್ಠ ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಪಕ್ಕದ ರಾಜ್ಯ ತಮಿಳುನಾಡು, ಆಂದ್ರ, ಕೇರಳ ಸಕರ್ಾರಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ತುತರ್ು ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶಾಮತರಾಜ ಜೈನ್,ಎಂ.ದಯಾನಂದ, ಬಸವರಾಜ ಸಂಶಿ, ಬಿಚ್ಚುಗತ್ತಿ ಖಾಜಾ ಹುಸೇನ್, ಬಿ.ಜಯಲಕ್ಷ್ಮಿ, ಶಿವಕುಮಾರಗೌಡ,ಎಚ್.ಸವಿತಾ ಇದ್ದರು 

ಸುದ್ದಿ ಓದಿ