ಗುರುಪೂರ್ಣಿಮೆ ಅಂಗವಾಗಿ ಚರಂತಿಮಠದ ಪೂಜ್ಯರಿಗೆ ಪಾದಪೂಜೆ, ಸನ್ಮಾನ

ಗುರುಪೂರ್ಣಿಮೆ ಅಂಗವಾಗಿ ಚರಂತಿಮಠದ ಪೂಜ್ಯರಿಗೆ ಪಾದಪೂಜೆ, ಸನ್ಮಾನ Foot worship and respect to the venerable ones of Charanthi Math on the occasion of Guru Purnima

ಬೀಳಗಿ 31 :  ಗುರುಪೂರ್ಣಿಮೆ ಅಂಗವಾಗಿ ಗ್ರಾಮದ ಚರಂತಿಮಠದಲ್ಲಿ ಸಂಗಮಯೋಗಿ ಗಜಾನನ ಯುವಕ ಮಂಡಳಿಯ ವತಿಯಿಂದ ಪೂಜ್ಯರಾದ ವೀರ ಸಂಗಮೇಶ್ವರ ಶಿವಾಚಾರ್ಯರಿಗೆ ಪಾದಪೂಜೆ ಸಲ್ಲಿಸಿ ಗೌರವ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯರು, ಗುರು-ಶಿಷ್ಯರ ಸಂಬಂಧವು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದ್ದು, ಗುರುವಿನ ಮಾರ್ಗದರ್ಶನದಲ್ಲಿ ಸಾಗುವವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು. ಪ್ರತಿಯೊಂದು ಶುಭ ಕಾರ್ಯದಲ್ಲಿಯೂ ಗುರುವಿನ ಆಶೀರ್ವಾದ ಹಾಗೂ ಮಾರ್ಗದರ್ಶನಕ್ಕೆ ವಿಶೇಷ ಮಹತ್ವವಿದೆ ಎಂದು ತಿಳಿಸಿದರು.

ಸಂಗಮಯೋಗಿ ಗಜಾನನ ಯುವಕ ಮಂಡಳಿಯ ಅಧ್ಯಕ್ಷ ವಿಶ್ವನಾಥ ಮಠಪತಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಸ್ಥಾನ ಅತ್ಯುನ್ನತವಾಗಿದೆ. ಗುರು ತೋರಿದ ಸನ್ಮಾರ್ಗವನ್ನು ಅನುಸರಿಸಿದರೆ ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಬಳಿಕ ಗ್ರಾಮದ ಮುಖಂಡರು ಹಾಗೂ ಯುವಕರು ಪೂಜ್ಯರಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ಗುರುಪೂರ್ಣಿಮೆ ಅಂಗವಾಗಿ ಗ್ರಾಮದ ರಾಮಲಿಂಗೇಶ್ವರ, ಮಾರುತೇಶ್ವರ, ಸಿದ್ದಲಿಂಗೇಶ್ವರ, ಬೀರ​‍್ಪದೇವರು ಹಾಗೂ ಭರಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಮತ್ತು ಭಕ್ತರ ದರ್ಶನ ಕಾರ್ಯಕ್ರಮಗಳು ನೆರವೇರಿದವು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಅನಿಲ ಚರಂತಿಮಠ, ಸಂಗಮೇಶ ಚರಂತಿಮಠ, ಪ್ರಶಾಂತ ಸಣಗೌಡ್ರ, ಕೃಷ್ಣ ಗಾಣಿಗೇರ, ಚನ್ನಪ್ಪ ಅಂಬಿಗೇರ, ಸಚಿನ ನಿರಾಕಾರಿ, ಬಸು ಹಳ್ಳಿ, ಸಚಿನ ಕುನ್ನಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಫೋಟೋ ಕ್ಯಾಪ್ಷನ್‌: ಬೀಳಗಿ :ಕುಂದರಗಿಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಸಂಗಮಯೋಗಿ ಗಜಾನನ ಯುವಕ ಮಂಡಳಿಯ ವತಿಯಿಂದ ಚರಂತಿಮಠದ ಪೂಜ್ಯರಾದ ವೀರಸಂಗಮೇಶ್ವರ ಶಿವಾಚಾರ್ಯರಿಗೆ ಪಾದಪೂಜೆ ನೆರವೇರಿಸಿ ಸನ್ಮಾನಿಸಲಾಯಿತು.