ಜಮಖಂಡಿ

ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಲಾಭ ಪಡೆದುಕೊಳ್ಳಿ: ಶಾಸಕ ನ್ಯಾಮಗೌಡ

ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಲಾಭ ಪಡೆದುಕೊಳ್ಳಿ: ಶಾಸಕ ನ್ಯಾಮಗೌಡ
ನಗರದ ಕೃಷಿ ಇಲಾಖೆಯಲ್ಲಿ ನಡೆದ ವಿಶ್ವ ಮಣ್ಣು ದಿನಾಚರಣೆಯನ್ನು ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು

ಲೋಕದರ್ಶನ ವರದಿ,

ಜಮಖಂಡಿ 09: ಕೃಷಿಯಲ್ಲಿ ಯಶಸ್ಸು ಪಡೆಯಬೇಕಾದರೆ ಕೇವಲ ಕಬ್ಬು ಬೆಳೆ ಮಾತ್ರ ಬೆಳೆಯದೇ ಇತರೆ ಬೆಳೆಗಳನ್ನು ಬೆಳೆಯುವ ಪದ್ದತಿ ರೂಢಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ದತಿಯೊಂದಿಗೆ ಕೃಷಿ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಚಟುವಟಿಕೆಗಳನ್ನು ಅಳವಡಿಸಿಕೊಂಡಲ್ಲಿ ಸುಸ್ಥಿರ ಆದಾಯ ಪಡೆದುಕೊಳ್ಳಬಹುದು. ಅಲ್ಲದೇ ಮುಂದಿನ ಉತ್ತಮ ಕೃಷಿಗಾಗಿ ಮಣ್ಣು ಮತ್ತು ನೀರು ಉಳಿಸುವ ಕಾರ್ಯ ಅತ್ಯವಶ್ಯವಾಗಿದೆಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಚಾಪ್ಟರ್ ಹಾಗೂ ಐಸಿಐಸಿಐ ಫೌಂಡೇಶನ್ ಇವರ ಸಹಯೋಗದಲ್ಲಿ 2022-23 ನೇ ಸಾಲಿನ ಆತ್ಮ ಯೋಜನೆಯಡಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ನಡೆದ ಮಣ್ಣಿನ ಫಲವತ್ತತೆ ಮತ್ತು ಸಮಗ್ರ ಪೋಷಕಾಂಶಗಳ ಬಳಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಕೃಷಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳು, ವಿಜ್ಞಾನಿಗಳು ತಿಳಿಸುವ ಹೊಸ ತಾಂತ್ರಿಕತೆಗಳು ಮತ್ತು ಆಧುನಿಕ ಕೃಷಿ ಪದ್ದತಿಗಳನ್ನು ಅಳಡಿಸಕೊಳ್ಳುವಂತೆ ಹಾಗೂ ಉಪ ಕಸುಬುಗಳನ್ನು ಮಾಡಿಕೊಳ್ಳವ ಕುರಿತು ಕರೆ ನೀಡಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ಪ್ರಸನ್ನ, ಕೃಷಿ ಪರಿಕರ ಉಧ್ಯಮಿ  ಬಾಹುಬಲಿ ಕೊಕಟನೂರ, ಐಸಿಐಸಿಐ ಫೌಂಡೆಶನನ್ ಅಭಿವೃದ್ಧಿ ಅಧಿಕಾರಿ ಪುಷ್ಪಾ ಕಾಟಗಲ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ಅಭಯಕುಮಾರ, ಮೊರಬ ಉಪಕೃಷಿ ನಿದರ್ೇಶಕ ಕೆ.ಎಸ್.ಅಗಸನಾಳ, ಸಹಾಯಕ ಕೃಷಿ ನಿದರ್ೇಶಕ ಎಂ.ಎಸ್.ಬುಜುರುಖ ಮಾತನಾಡಿದರು,

ಕಾರ್ಯಕ್ರಮದಲ್ಲಿ 150 ಕ್ಕಿಂತ ಹೆಚ್ಚು ಆತ್ಮ ಯೋಜನೆಯ ಮಹಿಳಾ ಮತ್ತು ಪುರುಷ ಸಂಘಗಳ ಸದಸ್ಯರು, ಕೃಷಿ ಸಖಿಯರು, ಪ್ರಗತಿಪರ ರೈತರು ಪಾಲ್ಗೊಂಡಿದ್ದರು. ಕೃಷಿ ಅಧಿಕಾರಿ ಶ್ರೀನಿವಾಸ ಪಾಟೀಲ, ಎಸ್.ಎಂ.ಬಿರಾದಾರ, ಶಂಕರ ಪವಾರ, ರಮೇಶ ಪಡಸಲಗಿ ಭಾಗವಹಿಸಿದ್ದರು. ಆತ್ಮಯೋಜನೆ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಕೆ.ಎ.ಜಮಖಂಡಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರವೀಣ ಕೊಪ್ಪದ ವಂದಿಸಿದರು. 


ಸುದ್ದಿ ಓದಿ