ಕೃಷಿ ಪದವಿಧರರ ಹೋರಾಟಕ್ಕೆ ರೈತ ಸಂಘ ಬೆಂಬಲ

ಕೃಷಿ ಪದವಿಧರರ ಹೋರಾಟಕ್ಕೆ ರೈತ ಸಂಘ ಬೆಂಬಲ  Farmers' association supports the agitation by agriculture graduates

ಲೋಕದರ್ಶನ ವರದಿ 

          ವಿಜಯಪುರ 30 : ಕೃಷಿ ಪಧವಿದಾರರು ಪ್ರಮುಖವಾದ 6 ಬೇಡಿಕೆಗಳನ್ನು ಇಟ್ಟುಕೊಂಡು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳಾದ ಡಾ. ಎಂ ಎಂ ಜಮಾದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ  ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.  

ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಮಾತನಾಡುತ್ತಾ ಕಳೆದ ಹತ್ತು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗ ಅನುಮೊದನೆ ಸಿಕ್ಕಿರುವುದು ಒಂದು ಕಡೆ ಖುಷಿ ಉಂಟಾದರೆ ಇನ್ನೊಂದೆಡೆ 3-4 ವರ್ಷಗಳ ಕಾಲ ಕೃಷಿ ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ತಜ್ಞ ಹಾಗೂ ಅನುಭವಿ ಪ್ರಾಧ್ಯಾಪಕರಿಂದ ತರಬೇತಿ ಹಾಗೂ ಅಧ್ಯಯನ ಪಡೆದು ಬಂದಿರುವ ಕೃಷಿ ಪದವಿದರರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದು ಇದಕ್ಕೆ ರೈತ ಸಂಗ ಯಾವಾಗಲು ಬೆಂಬಲ ಸೂಚಿಸುತ್ತೆವೆ ಎಂದರು.  

ಈ ನೇಮಕಾತಿ ಹುದ್ದೆಗಳಿಗೆ ಬಿ.ಇ. ಬಯೋಟೆಕ್ನಾಲಜಿ ಪದವಿಧರರಿಗೂ ಅವಕಾಶ ಕಲ್ಪಿಸಿದನ್ನು ನಾವೂ ಕೂಡಾ ತೀರ್ವವಾಗಿ ವಿರೋಧ ವ್ಯಕ್ತಪಡಿಸುತ್ತೆವೆ, ರೈತರ ಜಮೀನಿನಲ್ಲಿ ಬರುವ ಸಮಸ್ಯೆಗಳ ಬಗ್ಗೆ ಇಂಜಿನಿಯರಿಂಗ ವಿದ್ಯಾರ್ಥಿಗಳಿಗೆ ಎನು ಗೊತ್ತಿರಲು ಸಾಧ್ಯ, ಕುಡಲೇ ಅವರನ್ನು ಕೈಬಿಡಬೇಕು ಹಾಗೂ ಮತ್ತೊಂದಿಷ್ಟು ಕಾಲಾವಕಾಶ ಮಾಡಿಕೊಡಬೇಕು, ಹಾಗೆ ಸ್ಪೋರ್ಟ್ಸ ಕೋಟಾದಲ್ಲಿ ಕೃಷಿ ಪದವಿಧರರಿಗೂ ಮಿಸಲಾತಿ ನಿಡಬೇಕು, ದೇಶಿ ಕೋರ್ಸನ್ನು ಕೈಬಿಡಬೇಕು ಎಂದಭ ಹೋರಾಟ ಯಶಸ್ವಿಯಾಗಲಿ, ಮುಂದೆ ನೀವೂ ಕೂಡಾ ರೈತರ ಸೇವೆಯನ್ನು ಯಾವುದೇ ಲಂಚದ ಆಸೆಗೆ ಬೀಳದೆ ಎಲ್ಲಾ ರೈತರಗೆ ನ್ಯಾಯಯುತ ಕೆಲಸ ಮಾಡಿಕೊಡಿ ರೈತ ಸಂಘ ಯಾವಾಗಲು ನಿಮ್ಮ ಪರವಾಗಿ ನಿಲ್ಲುತ್ತದೆ ಎಂದರು. 

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾಸಂಚಾಲಕರಾದ ಮಹಾದೇವ ಬನಸೋಡೆ, ತಾ. ಕಾರ್ಯಾಧ್ಯಕ್ಷರಾದ ರಾಮಸಿಂಗ ರಜಪೂತ, ತಾ,ಉಪಾಧ್ಯಕ್ಷರಾದ ಬಸಗೊಂಡ ತೇಲಿ, ಜಂಬಗಿ ಅಧ್ಯಕ್ಷರಾದ ಗೋರಕನಾಥ ಗೇರಡೆ, ಸುಭಾಸ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕಂಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ, ಸೇರಿದಂತೆ ಅಂಬಿಕಾ, ಶರಣಬಸ್ಸು ನಾಯ್ಕಲ್, ಈಶ್ವರಿ ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳಾದ ಇದ್ದರು.