ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹೆದ್ದಾರಿ ತಡೆದು ಪ್ರತಿಭಟನೆಕಬ್ಬು ಬೆಳೆಗೆ ಯೋಗ್ಯ ದರ ಘೋಷಿಸಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಆಗ್ರಹ
Farmers' association blocks highway in protest demanding fulfillment of various demands, announces f
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹೆದ್ದಾರಿ ತಡೆದು ಪ್ರತಿಭಟನೆಕಬ್ಬು ಬೆಳೆಗೆ ಯೋಗ್ಯ ದರ ಘೋಷಿಸಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಆಗ್ರಹ
ಹಾರೂಗೇರಿ 11: ಕಬ್ಬು ಬೆಳೆಗೆ ಯೋಗ್ಯ ಬೆಲೆ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಬೇಕು ಹಾಗೂ ರೈತರ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ನೇತೃತ್ವದಲ್ಲಿ ಹಾರೂಗೇರಿ ಕ್ರಾಸ್‌ನಲ್ಲಿ ಸಾವಿರಾರು ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಸೂಕ್ತ ಬೆಲೆ ಸಿಗದೇ ರೈತ ಆರ್ಥಿಕವಾಗಿ ಕುಗ್ಗಿ, ಸಾಲದ ಸುಳಿಗೆ ಸಿಲುಕಿ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈವರೆಗೂ ಯಾವೊಬ್ಬ ಕಾರ್ಖಾನೆ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮತ್ತೊಂದು ಕಾರ್ಖಾನೆ ಸ್ಥಾಪಿಸುತ್ತಿದ್ದಾರೆ. ತೂಕದಲ್ಲಾಗುತ್ತಿರುವ ಮೋಸ ತಡೆಗಟ್ಟಲು ಎಪಿಎಂಸಿಯಿಂದ ಡಿಜಿಟಲ್ ತೂಕದ ಸೇತುವೆಗಳನ್ನು ಅಳವಡಿಸಬೇಕು. ಕಬ್ಬು ಪೂರೈಸಿದ 15ದಿನಗಳೊಳಗಾಗಿ ಬಿಲ್ಲನ್ನು ಜಮಾ ಮಾಡಬೇಕು. ತಡವಾದಲ್ಲಿ ಅದಕ್ಕೆ 15ಅ ಬಡ್ಡಿ ಸೇರಿಸಿ ಕೊಡಬೇಕು. ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸಬಾರದು. ಕಬ್ಬು ಕಟಾವು ಮಾಡುವವರಿಗೆ ಕಾರ್ಮಿಕರ ಕಾರ್ಡ ನೀಡಬೇಕೆಂದು ರೈತರು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ ಮುಖ್ಯಮಂತ್ರಿಗಳು ರೈತರ ಹಿತ ಕಾಯಲು ಕಬ್ಬು ಬೆಳೆಗೆ ಯೋಗ್ಯ ದರ ನಿಗದಿ ಮಾಡಬೇಕು. ರಾಜ್ಯದಲ್ಲಿರುವ ಶಾಸಕ, ಮಂತ್ರಿಗಳದ್ದೇ ಬಹುತೇಕ ಕಾರ್ಖಾನೆಗಳಿದ್ದು, ರೈತರ ಗೋರಿಯ ಮೇಲೆ ರಾಜಕಾರಣ ಮಾಡುವುದನ್ನು ಬಿಟ್ಟು, ಕಬ್ಬು ಬೆಳೆಗಾರರನ್ನು ರಕ್ಷಿಸುವ ಕಾರ್ಯವಾಗಬೇಕು. ಈಬಾರಿ ಕಬ್ಬು ಬೆಳೆಗೆ ಯೋಗ್ಯವಾದ ಬೆಲೆ ಪಡೆದೇ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತೇವೆ. ರಾಜ್ಯದ ಕಬ್ಬು ಬೆಳೆಗಾರರು ಒಗ್ಗಟ್ಟಾಗಿ ಯೋಗ್ಯ ಬೆಲೆಯನ್ನು ಪಡೆದು ಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡುತ್ತ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ಕಬ್ಬಿಗೆ ಯೋಗ್ಯ ದರ ನಿಗದಿ ಪಡಿಸದಿದ್ದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಲಕ್ಷಾಂತರ ಜನ ರೈತರು ಸೇರಿ ರಾಷ್ಟ್ರ ಹೆದ್ದಾರಿ ಬಂದ್‌ಮಾಡಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಶನ್ ಅವರು ಪ್ರತಿಭಟನಾ ನಿರತ ರೈತರಿಂದ ಮನವಿ ಸ್ವೀಕರಿಸಿ 4ದಿನದಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಎಂಡಿಯವರ ಜತೆ ಸಭೆ ಮಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆಂದು ಹೇಳಿದರು. ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜತ್-ಜಾಂಬೋಟಿ ರಾಜ್ಯ ಹೆದ್ದಾರಿ ಮತ್ತು ಜಮಖಂಡಿ-ಮಿರಜ ನೆರೆರಾಜ್ಯ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಬಸ್ ಹಾಗೂ ವಾಹನ ಸ್ಥಗಿತದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.
ರಾಜ್ಯ ಸಂಘ ಉಪಾಧ್ಯಕ್ಷ ರಾಜು ಮಲ್ಲಾಪುರಿ, ಕಾರ್ಯಾಧ್ಯಕ್ಷ ರಾಜು ಪವರ, ಸಂಚಾಲಕ ಬಾಬುಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಬೆಳಗಾವಿ ಜಿಲ್ಲಾಧ್ಯಕ್ಷ ಕುಮಾರ ಮರ್ದಿ, ಉಪಾಧ್ಯಕ್ಷ ಗೋಪಾಲ ಕುಕನೂರ, ರಾಯಬಾಗ ತಾಲೂಕಾಧ್ಯಕ್ಷ ರಮೇಶ ಕಲರ್, ಅಥಣಿ ಅಧ್ಯಕ್ಷ ಮುಬಾರಕ ತಾಂಬೋಳಿ, ಜಿಲ್ಲಾ ಮುಖಂಡ ನಿಂಗಪ್ಪ ಪಕಾಂಡಿ, ಬಾಗಲಕೋಟ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ವಿವೇಕ ಘಂಟಿ, ಮಲ್ಲಿಕಾರ್ಜುನ ಖಾನಗೌಡರ, ಉತ್ತಮ ಪಾರ್ಥನಳ್ಳಿ, ವಿಜಯ ನಾಯಿಕ, ಕಾಶಪ್ಪ ಜಂಬಗಿ, ಭರಮು ಚಿಮ್ಮಡ್, ಕಲ್ಲನಗೌಡ ಪಾಟೀಲ, ದಶರಥ ನಾಯಿಕ, ತಮ್ಮಣ್ಣ ಪಾಟೀಲ ಹಾಗೂ ಬಾಗಲಕೋಟ, ಬೆಳಗಾವಿ ಜಿಲ್ಲೆಗಳ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 