ಕೆರೆ ತುಂಬಿಸಿ, ಕಾಲುವೆಗಳಿಗೆ ನೀರು ಹರಿಸಿ, ರೈತ ಸಂಘ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿ
ಹೂವಿನಹಡಗಲಿ ಆ.01- ಮಳೆಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನೀರು ಹರಿಸುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವುದು. ಏಕೆಂದರೆ ಮಳೆಗಾಲದಲ್ಲಿ ಕೆಲವೊಂದು ಹಳ್ಳಿಗಳಲ್ಲಿ ಟ್ಯಾಂಕರಗಳಿಂದ ನೀರು ಪೂರೈಕೆ ಮಾಡುತ್ತಿದ್ದು, ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸರಕಾರ ಜನಜಾನುವಾರುಗಳ ಹಿತದೃಷ್ಟಿಯಿಂದ ನೀರು ಹರಿಸಬೇಕು ಎಂದು ತಾಲೂಕು ರೈತ ಸಂಘದಿಂದ ಆಗ್ರಹಿಸಿದರು. ರಾಜ್ಯ ರೈತ ಸಂಘ ಹಡಗಲಿ ವತಿಯಿಂದ ಶುಕ್ರವಾರ ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಇಲಾಖೆ ಮುತ್ತಿಗೆ ಹಾಕಿ ಅಡುಗೆ ಮಾಡುವ ಮೂಲಕ ಧರಣಿ ಸತ್ಯಾಗ್ರಹ ಮಾಡಿ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ಮಾನ್ಯರ ಮಸಾಲವಾಡ ಗ್ರಾಮ ಪಂಚಾಯತಿಗೆ ಸೇರಿದ ಕೆ ಕೆ ತಾಂಡ ರೈತರು ತಮ್ಮಊರಿನ ಕೆರೆಯಲ್ಲಿ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಹಾಕಿಸಿದರು ನೀರು ಸಿಗತ್ತಿಲ್ಲ ಕೂಡಲೇಕಾಲುವೆಗೆ/ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಸಿದ್ದಪ್ಪ ಹೊಸಮನಿ. ದೇವಪ್ಪ ಇಟ್ಟಿಗಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಬಿಹೆಚ್ ಎಂ. ವಿಜಯಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷರು ಮಂಜುನಾಥ್ , ಕೆ ರೇಖಾ, ರೈತ ಉಪಾಧ್ಯಕ್ಷರು ವಿಠಲ್ ನಾಯಕ , ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ , ಡಿ.ಬೋಜ್ಯಾನಾಯ್ಕ, ಶೇಖರನಾಯ್ಕ ಇದ್ದರು.