ಹೂವಿನ ಹಡಗಲಿ

ರೈತ ಮಲ್ಲಪ್ಪ ಶವ ಪತ್ತೆ

ರೈತ ಮಲ್ಲಪ್ಪ ಶವ ಪತ್ತೆ

ಲೋಕದರ್ಶನ ವರದಿ 

ಹೂವಿನಹಡಗಲಿ 07: ಕಳೆದ ಒಂದು ವಾರದ ಹಿಂದೆ ಕಾಣೆಯಾಗಿದ್ದ ರೈತ ನಂದಿಹಳ್ಳಿ ಬಣಕಾರ ಮಲ್ಲಪ್ಪ(49)ಅವರ ಶವ ಭಾನುವಾರ ಪತ್ತೆಯಾಗಿದೆ.  

ತಾಲೂಕು ಕಚೇರಿ ಹಿಂಭಾಗದ ಅವರ ಜಮೀನಿನ ಪಕ್ಕದ ಜಾಲಿಯ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಸಿಕ್ಕಿದ್ದು, ಪಕ್ಕದಲ್ಲಿ ವಿಷದ ಬಾಟಲಿ ಇದ್ದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. 

ಮಲ್ಲಪ್ಪ ಅವರು ಎರಡು ಎಕರೆ ಜಮೀನನ್ನು 2006ರಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮಾರಾಟ ಮಾಡಿದ್ದರು. 22ಸೆಂಟ ಜಾಗದಲ್ಲಿ ಭೂಸ್ವಾಧೀನ ರದ್ದುಪಡಿಸಿ ತಮಗೆ ಒಪ್ಪಿಸುವಂತೆ ಸುದೀರ್ಘ ಹೋರಾಟ ನಡೆಸಿದ್ದರು. ಕಾನೂನು ಬಾಹಿರವಾಘಿ ಭೂಸ್ವಾಧೀನದಿಂದ ಅನ್ಯಾಯವಾಗಿದೆ ಎಂದು ಮಲ್ಲಪ್ಪ ಈಚೆಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆ.30ರಂದು ಅವರು ಕಾಣೆಯಾಗಿದ್ದರು. 

ಜ.4ರಂದು ಜಮೀನು ಸರ್ವೆ ಮಾಡುವ ಸಂದರ್ಭದಲ್ಲಿ ಕೆಲವರು ಬೆದರಿಕೆ ಹಾಖಿದ್ದರು. ಹಾಹಾಗಿ ಈ ಸಾವಿನ ಬಗ್ಗೆ ಅನುಮಾನಗಳಿದ್ದು, ಸೂಕ್ತ ತನಿಖೆ ನಡೆಸುವಂತೆ ಕೋರಿ ಮೃತ ಮಲ್ಲಪ್ಪನ ಪತ್ನಿ ಸರಸ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ