ಜಾತ್ರೆಗಳಿಂದ ಭಾವೈಕ್ಯತೆ ಸಮೃದ್ಧಿ: ಬಾಬಾಸಾಹೇಬ ಪಾಟೀಲ
Fairs foster unity: Babasaheb Patil
ನೇಸರಗಿ 27: ಜಾತ್ರೆಗಳಿಂದ ಪರಸ್ಪರ ಪ್ರೀತಿ, ಭಾವೈಕ್ಯತೆ, ಮಧುರ ಸಂಬಂಧಗಳ ಬೆಳವಣಿಗೆ ಹೊಂದಿ ಭಕ್ತಿ ಭಾವದಿಂದ ಸಮೃದ್ಧಿ ಆಗಿ ಶಾಂತಿ ಸಹಬಾಳ್ವೆ ಸಾದಿಸತ್ತವೆ ಮತ್ತು ಈ ವನ್ನೂರ ಗ್ರಾಮದೇವಿಯರ ಜಾತ್ರೆಯಿಂದ ಈ ಭಾಗಕ್ಕೆ ಉತ್ತಮ ಮಳೆ ಬೆಳೆ ಬಂದು ರೈತ, ಬಡವ, ಬಲಿದರು ಬೆಳೆಯಲು ತಾಯಿ ಆಶೀರ್ವಾದ ಮಾಡಿಲಿ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಸೋಮವಾರದಂದು ಸಮೀಪದ ವನ್ನೂರ ಗ್ರಾಮದ ಪ್ರತಿಷ್ಠಿತ ಗ್ರಾಮದೇವಿಯರ ಜಾತ್ರಾ ಪ್ರಯುಕ್ತ ಗ್ರಾಮಕ್ಕೆ ಭೆಟ್ಟಿ ಗ್ರಾಮದೇವಿಯರ ದರ್ಶನ ಪಡೆದು,
ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷರು, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷರಾದ ಬಾಳಾಸಾಹೇಬ ದೇಸಾಯಿ, ಯುವ ಮುಖಂಡ ಸಚಿನ ಪಾಟೀಲ, ಹೊನ್ನಾನಾಯ್ಕ ಪಾಟೀಲ, ನಾಗಪ್ಪ ಬಶೆಟ್ಟಿ, ಶಂಕರ ಮಡಿವಾಳರ, ಶುಭಾಶಗೌಡ ಪಾಟೀಲ, ಮನೋಜ ಕೆಳಗೇರಿ, ಸಿದ್ದಗೌಡ ಪಾಟೀಲ, ದಿಲಾವರ ಮುರಗಿ, ಹುಸೇನ್ ಕಿಲ್ಲೆದಾರ, ಸಿದ್ದಪ್ಪ ಕಡಭಿ, ಪರನಾಯ್ಕ ನಾಯ್ಕರ, ಶುಭಾಷ ರಾಮನಟ್ಟಿ, ರುದ್ರಗೌಡ ಪಾಟೀಲ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ವನ್ನೂರ, ಸುನಕುಂಪಿ, ಮಾಸ್ತಮರ್ಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 