ವಲಸಿಗ ಕಾರ್ಮಿಕರನ್ನು ಊರಿಗೆ ತಲುಪಿಸಲು ದುಬಾರಿ ದರ: ಆಮ್ ಆದ್ಮಿ ಪಕ್ಷ ಖಂಡನೆ
ಬೆಂಗಳೂರು, ಮೇ 2,ಉತ್ತರ ಕರ್ನಾಟಕದ ವಲಸಿಗ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಮೂರು ಪಟ್ಟು ದರ ವಿಧಿಸುತ್ತಿರುವ ಸಾರಿಗೆ ಇಲಾಖೆ ಕ್ರಮವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ನಗರದಲ್ಲಿ ಉತ್ತರ ಕರ್ನಾಟಕದಿಂದ ಬಂದಿರುವ ಸಾವಿರಾರು ಬಡ ವಲಸಿಗ ಕಾರ್ಮಿಕರು ಕಳೆದ 40 ದಿವಸಗಳಿಂದ ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅತ್ತ ಊರಿಗೂ ಹೋಗಲಾಗದೆ ಇತ್ತ ಕೆಲಸವೂ ಸಿಗದೆ ಒಂದೊತ್ತಿನ ಊಟಕ್ಕೂ ಅಲೆದಾಡುವಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದ ಈ ಬಡ ಕೂಲಿ ಕಾರ್ಮಿಕರು ಸರ್ಕಾರದ ನಿರ್ಧಾರದಿಂದಾಗಿ ಇನ್ನೇನು ನಮ್ಮ ನಮ್ಮ ಊರುಗಳಿಗೆ ಸೇರಿಕೊಳ್ಳುತ್ತೇವೆ ಎಂಬ ಸಂತಸದಿಂದ ಇರುವಾಗಲೇ ರಾಜ್ಯ ಸಾರಿಗೆ ಇಲಾಖೆಯು ಇವರನ್ನು ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ತಲುಪಿಸಲು ಮೂರು ಪಟ್ಟು ದರವನ್ನು ವಿಧಿಸಿ ಮತ್ತೊಮ್ಮೆ ಇವರುಗಳನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಪಕ್ಷ ಆರೋಪಿಸಿದೆ.ನಗರದ ಬನ್ನಪ್ಪ ಪಾರ್ಕ್‌ನಲ್ಲಿ ನೂರಾರು ಕೂಲಿ ಕಾರ್ಮಿಕರು ಅವರವರ ಸ್ಥಳಗಳಿಗೆ ತಲುಪಲು ಆಸೆಯಿಂದ ಬರುತ್ತಿರುವವರಿಗೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದಾಗಿ ತೀವ್ರ ನಿರಾಸೆ ಕಾಡುತ್ತಿದೆ. ಉತ್ತರ ಕರ್ನಾಟಕದಿಂದ ಗುಳೆ ಬಂದಿರುವ ಹಲವಾರು ಕುಟುಂಬಗಳು ತಮ್ಮ ಊರುಗಳಿಗೆ ಮರಳಲು ಇಂದು ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡುವಂತಹ ದುರವಸ್ಥೆಗೆ ತಲುಪಿದ್ದಾರೆ.
ಸಾರಿಗೆ ಇಲಾಖೆಯು ಹೋಗುವ ಮತ್ತು ವಾಪಸ್ ಬರುವ ಬಸ್ ಪ್ರಯಾಣದ ವೆಚ್ಚ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಉಳಿಯುವಂತಹ ಸೀಟುಗಳ ವೆಚ್ಚವನ್ನು ಸಹ ಈ ಬಡ ನಿರ್ಗತಿಕ ಕಾರ್ಮಿಕರಿಂದ ವಸೂಲಿ ಮಾಡುತ್ತಿರುವುದು ತೀರಾ ದುರಂತದ ಸಂಗತಿ. ಬನ್ನಪ್ಪ ಪಾರ್ಕ್ ನಲ್ಲಿ ಸಾರಿಗೆ ಇಲಾಖೆಯ ಈ ದುಬಾರಿ ವೆಚ್ಚವನ್ನು ಭರಿಸಲಾಗದೆ ಅನೇಕ ಗರ್ಭಿಣಿಯರು, ಮಹಿಳೆಯರು ಪುಟ್ಟ ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಪರದಾಡುತ್ತಿರುವ ದೃಶ್ಯಗಳು ಮನ ಕಲಕುವಂತಿದೆ. ಈ ಕೂಡಲೇ ರಾಜ್ಯ ಸರ್ಕಾರವು ತನ್ನ ಈ ದುರುಳ ನೀತಿಯನ್ನು ವಾಪಸ್ ಪಡೆದುಕೊಂಡು ಉಚಿತವಾಗಿ ಅಥವಾ ಕೇವಲ ಡೀಸೆಲ್ ಗೆ ಆಗುವ ವೆಚ್ಚವನ್ನು ಮಾತ್ರ ಪಡೆದುಕೊಂಡು ಅವರುಗಳ ಊರುಗಳಿಗೆ ತಲುಪಿಸುವಂತಹ ಸತ್ಕಾರ್ಯವನ್ನು ಮಾಡಲು ಮುಂದಾಗಬೇಕೆಂದು ಪ್ರಕಟಣೆಯಲ್ಲಿ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 