ಮಾನಸಿಕ ಅಸ್ವಸ್ಥತೆ ಹೊಂದಿರುವ ನಿರಾಶ್ರಿತರ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ ಸ್ಥಾಪನೆ
Establishment of an emergency care and recovery center for refugees with mental illness
ಗದಗ 21 : ಗದಗ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ನಿರಾಶ್ರಿತರಿಗೆ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರವನ್ನು ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ ಮಲ್ಲಸಮುದ್ರ ಗದಗದಲ್ಲಿ ಕೊಠಡಿ ಸಂಖ್ಯೆ: 232ರಲ್ಲಿ ಸ್ಥಾಪನೆಗೊಂಡಿದೆ. ಇದೊಂದು ಕರ್ನಾಟಕ ಸರ್ಕಾರ ಹಾಗೂ ನಿಮ್ಹಾನ್ಸ್ ಸಂಸ್ಥೆ ಆಲದಮರ ಫೌಂಡೇಶನ್, ಸಾರಥಿ ಸಂಸ್ಥೆ ಹಿರೇಹಂದಿಗೋಳ, ಗದಗ ಇವರ ಸಹಯೋಗದೊಂದಿಗೆ ಉಚಿತವಾಗಿ ಮಾನಸಿಕವಾಗಿ ಬಳಲುತ್ತಿರುವ ಬೀದಿಗಳಲ್ಲಿ ಗುರಿಯಿಲ್ಲದೆ ಅಲೆದಾಡುತ್ತಿರುವ ನಿರಾಶ್ರಿತರಿಗಾಗಿ ತುರ್ತುಚಿಕಿತ್ಸೆಯನ್ನು ಹಾಗೂ ಅಸ್ವಸ್ಥತೆಗೊಂಡಿರುವಂತಹ ರೋಗಿಗಳಿಗಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮನೋವೈದ್ಯರಿಂದ ನೀಡಲಾಗುವುದು.
ಮತ್ತು ಗುಣಮುಖವಾಗುವರೆಗೂ ಉಚಿತ ಊಟ ಹಾಗೂ ಆರೈಕೆ ಓಷದೋಪಚಾರವನ್ನು ನೀಡಲಾಗುವುದು ಗುಣಮುಖ ಹೊಂದಿದವರನ್ನು ವಿಳಾಸ ಹಾಗೂ ಸಂಬಂಧಿಕರ ಮಾಹಿತಿಯನ್ನು ಪಡೆದು ಅವರಲ್ಲಿ ತಲುಪಲು ನೇರವಾಗುವುದಕ್ಕೆ ಈ ಕೇಂದ್ರ ಸಹಾಯವನ್ನು ಮಾಡಲಾಗುವುದು. ಗದಗ ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆ ಹಾಗೂ ಆರೈಕೆ ಕೇಂದ್ರ ಸ್ಥಾಪನೆಗೊಂಡಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 