ಇಂದು ನೆಟ್ಟ ಸಸಿ ನಾಳೆ ಮರವಾಗಿಸುವುದೇ ಪರಿಸರ ದಿನಾಚರಣೆ; ರೈತ ಭಾರತ ಪಕ್ಷದ ಕಚೇರಿಯಲ್ಲಿನ ಪರಿಸರ ದಿನಾಚರಣೆಯಲ್ಲಿ ಮಲ್ಲಿಕಾರ್ಜುನ ಕೆಂಗನಾಳ ಅಭಿಪ್ರಾಯ

ಇಂದು ನೆಟ್ಟ ಸಸಿ ನಾಳೆ ಮರವಾಗಿಸುವುದೇ ಪರಿಸರ ದಿನಾಚರಣೆ; ರೈತ ಭಾರತ ಪಕ್ಷದ ಕಚೇರಿಯಲ್ಲಿನ ಪರಿಸರ ದಿನಾಚರಣೆಯಲ್ಲಿ ಮಲ್ಲಿಕಾರ್ಜುನ ಕೆಂಗನಾಳ ಅಭಿಪ್ರಾಯ Environment Day is about planting a sapling today and making it a tree tomorrow; Mallikarjuna Kengan

ವಿಜಯಪುರ 07 : ಕೇವಲ ಜೂನ್ 5 ಬಂದಾಗ ಮಾತ್ರ ಪರಿಸರ ದಿನ ಆಚರಿಸಿದೇ, ವರ್ಷಪೂರ್ತಿ ಪರಿಸರ ಕಾಳಜಿ ಮಾಡಬೇಕು. ಇಂದು ನೆಟ್ಟ ಸಸಿಗಳು ಹೆಮ್ಮರವಾಗಿ ಬೆಳೆಸುವಂತ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.ನಗರದ ರೈತ ಭಾರತ ಪಕ್ಷದ ಕಚೇರಿಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿ ಪ್ರತಿಯೊಂದು ಜೀವರಾಶಿಯ ಆಗರವಾಗಿದ್ದು, ಪ್ರಕೃತಿಯಲ್ಲಿರುವ ಹಸಿರು ಸಸ್ಯ ಸಮೂಹ ಪ್ರತಿಯೊಂದು ಜೀವರಕ್ಷಕವಾಗಿದೆ. ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನಲ್ಲ ಅನ್ನುವುದನ್ನು ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ಪರಿಸರ ಸಂರಕ್ಷಿಸುವ ಮೂಲಕ ಮುಂದಿನ ತಲೆಮಾರಿಗೆ ಉತ್ತಮ ಗಾಳಿ ಬಿಟ್ಟುಹೋಗಬೇಕಾಗಿದೆ.  

ಈ ಪರಿಸರ ದಿನದಂದು ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಭೂಮಿಯನ್ನು ಹಸಿರಾಗಿಸಬೇಕಾಗಿದ್ದು, ಮನೆಗೆ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಮರವನ್ನಾಗಿಸುವ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು. ಹರಕಾರಿ ಬಡಾವಣೆಯ ಶಿವಾಲಯ ಗಾರ್ಡನ್ನಲ್ಲಿ ನಿತ್ಯ ಕೆಲಸ ಮಾಡುತ್ತಿರುವ ಈರ​‍್ಪ ನಾಶಿ ಹಾಗೂ ವರುಣ ನಗರದ ಗಾರ್ಡನ್ನಲ್ಲಿ ಗಿಡಗಳಿಗೆ ನೀರುಣಿಸುತ್ತಿರುವ ವಿಜಯಪುರ ಮಹಾನಗರ ಪಾಲಿಕೆಯ ನಿವೃತ್ತ ವರ್ಕ್‌ ಇನ್ಸ್ಪೆಕ್ಟರ್ ಕೇಸು ಬಿಕ್ಕು ನಾಯಕ್ ಅವರಿಗೆ ವಿಶೇಷವಾಗಿ ಸನ್ಮಾನಿಸುವ ಮೂಲಕ ಅರ್ಥಪೂರ್ಣ ವಿಶ್ವ ಪರಿಸರ ದಿನ ಆಚರಿಸಿದರು. ಗುತ್ತಿಗೆದಾರ ಶಿವು ಉಪ್ಪಲದಿನ್ನಿ, ವಕೀಲರಾದ ಎನ್‌.ಎಂ.ಕಲ್ಯಾಣಿ ಹಾಗೂ ಬಿ.ಸಿ.ಕಾಳಗಿ ಉಪಸ್ಥಿತರಿದ್ದರು.