ವಿದ್ಯುತ್ ಸ್ಪರ್ಶ :ಯುವಕ ಸಾವು
ಹೂವಿನಹಡಗಲಿ 24: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ದಾಸರಹಳ್ಳಿ ತಾಂಡದಲ್ಲಿ ಮಂಗಳವಾರ ಸಂಭವಿಸಿದೆ.
ಹೂವಿನಹಡಗಲಿಯ ವಿಜಯ ತಂದೆ ನಿಂಗರಾಜ (22) ಸಾವನ್ನಪ್ಪಿದ ದುರ್ದೈವಿ. .ದಾಸರಹಳ್ಳಿ ತಾಂಡದ ಕೃಷ್ಣನಾಯ್ಕ ಅವರ ಹೊಲದಲ್ಲಿ ವೆಲ್ಡಿಂಗ್ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.