ಬಾಗಲಕೋಟೆ

ಶಿಕ್ಷಣದಿಂದಲೇ ದೇಶದ ಪ್ರಗತಿ: ಸಂಸದ ಗದ್ದಿಗೌಡ

ಶಿಕ್ಷಣದಿಂದಲೇ ದೇಶದ ಪ್ರಗತಿ: ಸಂಸದ ಗದ್ದಿಗೌಡ

ತೇರದಾಳ:ಸಾಧು,ಸಂತರ,ಸತ್ಪುರಷರ ಆಶ್ರಯದಲ್ಲಿರುವ ಸಂಘ,ಸಂಸ್ಥೆಗಳಲ್ಲಿ ದಿವ್ಯ ಶಕ್ತಿ ಇರುತ್ತದೆ.ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಮತ್ತು ಹುಬ್ಬಳ್ಳಿಯ ವೀರಭಿಕ್ಷಾವತರ್ಿ ನೀಲಕಂಠಮಠದ ಪ.ಪೂ.ಜಗದ್ಗುರುಗಳಾದ ಶ್ರೀ ಶಿವಶಂಕರ ಮಹಾಸ್ವಾಮಿಗಳ ಅಡಿಯಲ್ಲಿ ನಡೆಯುತ್ತಿರುವ ಈ ಸಂಸ್ಥೆ ತನ್ನದೇ ಆದ ಇತಿಹಾಸ ಹೊಂದಲು ಕಾರಣವಾಗಿದೆ ಎಂದು ಹೇಳಲು ನನಗೆ ತುಂಬಾ ಹೆಮ್ಮ ಎನಿಸುತ್ತದೆ. ದೇಶ ಪ್ರಗತಿ ಹೊಂದಲು ಸಂಸ್ಕಾರಯುಕ್ತ ಶಿಕ್ಷಣದ ಅವಶ್ಯಕತೆ ಇದೆ. ಮಕ್ಕಳಲ್ಲಡಗಿದ ಸೂಪ್ತ ಶಕ್ತಿ ಹೊರಹೊಮ್ಮಿಸಬೇಕಾದರೆ ಇಂತಹ ಕಾರ್ಯಕ್ರಮ ಅತಿಅವಶ್ಯಕ ಕಾರಣ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೂಜ್ಯರ ಈ ಕಾರ್ಯ ಶ್ಲಾಘನಿಯವಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. 

    ಪಟ್ಟಣದ  ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ 31ನೇ ವಾಷರ್ಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಮಕ್ಕಳ ಸವರ್ಾಂಗೀಣ ಆಭೀವೃದ್ಧಿಗೆ ಗುರುಗಳು,ವಿದ್ಯಾಥರ್ಿಗಳು ಮತ್ತು ಪಾಲಕರೆಲ್ಲರೂ ಶ್ರಮವಹಿಸಬೇಕಾಗುತ್ತದೆ. ಎಷ್ಟೆ ಕಷ್ಟ ಬಂದರೂ ನಿಮ್ಮ ಮಕ್ಕಳಿಗೆ ಶಿಕ್ಷಣ ನಿಲ್ಲಿಸಬೇಡಿ.ಮಕ್ಕಳಿಗೆ ಇತಿಹಾಸ ಸೃಷ್ಟಿಸಿದವರ ಚರಿತ್ರೆ ಹೇಳಿ ಪ್ರೋತ್ಸಾಹಿಸಿ,ಮಕ್ಕಳನ್ನು ಮೊಬೈಲಗಳಿಂದ ದೂರವಿಡಿ ಎಂದರಲ್ಲದೆ ಪ್ರಸ್ತುತ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟದ ಕೆಲಸ ಆದರೂ ಸಹ ಪೂಜ್ಯರು ಹಾಗೂ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕ ವರ್ಗದ ಮತ್ತು ಸಿಬ್ಬಂದಿಗಳು ನಿರಂತರ ಪರಿಶ್ರಮದಿಂದ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತಂದಿದ್ದು ನೋಡಿ ನನಗೆ ಹೆಮ್ಮೆಯಾಗಿದೆ.ನಾನು ಸಹ ನನ್ನ ಕೈಲಾದಷ್ಟು ಸರಕಾರದಿಂದ ಸಹಾಯ ಮಾಡುತ್ತೇನೆ ಎಂದರು.

         ದಿವ್ಯ ಸಾನಿಧ್ಯ ವಹಿಸಿದ ಶ್ರೀ.ಪ.ಪೂ.ಜಗದ್ಗುರುಗಳಾದ ಶ್ರೀ ಶಿವಶಂಕರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು .ಅತಿಥಿಗಳಾದ ಅಂಬಾದಾಸ ಕಾಮೂರ್ತಿ,ನೀಲಕಂಠಪ್ಪ ಗೋಟೂರ ಮಾತನಾಡಿದರು.ವೇದಿಕೆಯಲ್ಲಿ ಪುರಸಭೆ ಅದ್ಯಕ್ಷೆ ಕುಸುಮಾಂಡಿನಿ ಬಾಬಗೊಂಡ,ಕಾಶಿನಾಥ ರಾಠೋಡ.ಸಚಿನ ಕೊಡತೆ, ಎಮ್.ಜಾಡರ,ಆರ್.ಸೋರಗಾವಿ,ಎಂ.ಕಲ್ಲೊಳ್ಳಿ,ರಮೇಶ ಜಾಡಗೌಡರ,ಶಿವಾನಂದ ಬೆಳಕೊಡ,ಗೊಡಚೆಪ್ಪ ಚರೂಟಿ, ಪ್ರಭು ಬಾದರದಿನ್ನಿ,ಪುಷ್ಪಲತಾ ಬಂಕಾಪೂರ ಇದ್ದರು. ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯನ್ನು ವಿಧ್ಯಾಥರ್ಿಗಳು ಹಾಡಿದರು. ಎಸ್.ಖವಾಸಿ ಸ್ವಾಗತಿಸಿ ನಿರೂಪಿಸಿದರು.ವ್ಹಿ.ಉಪ್ಪಿನ ಪ್ರಾಸ್ತಾವಿಕ ನುಡಿದರು.ಶಂಕರ ತಿಗಣಿ ವಂದಿಸಿದರು.  

  

ಸುದ್ದಿ ಓದಿ