ದತ್ತ ಇಂಡಿಯಾ ಶುಗರ್ ಸಕ್ಕರೆ ಕಾರ್ಖಾನೆಯ ಬಾಯಿಲರ್ ಅಗ್ನಿ ಪ್ರದೀಪನ
Dutta India Sugar Boiler Fire Lighting of Sugar Factory
ಚಡಚಣ 23: ಸಮೀಪದ ಹಾವಿನಾಳ ಗ್ರಾಮದ ದತ್ತ ಇಂಡಿಯಾ ಶುಗರ್ ಸಕ್ಕರೆ ಕಾಖಾನೆಯಲ್ಲಿ ಸೋಮವಾರ ಘಟಸ್ಥಾಪನೆಯ ಮೂಹರ್ತದಲ್ಲಿ ಕಾರ್ಖಾನೆಯ ಬಾಯಲರ್ ಅಗ್ನಿ ಪ್ರದೀಪನ ಮಾಡಲಾಯಿತು.
ಬಾಯಲರ್ ಅಗ್ನಿ ಪ್ರದೀಪನವನ್ನು ಕೃಷ್ಣ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಶ್ಯಾಮಸುಂದರ್ ಶಾಸ್ತ್ರಿ ನೆರವೇರಿಸಿದರು.
ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ, ಇದು ನಮ್ಮ ಕಂಪನಿಯ ನಾಲ್ಕನೆಯ ಕಬ್ಬು ನುರಿಸುವಿಕೆ ಹಂಗಾಮವಿದ್ದು, ಪ್ರಸಕ್ತ ಸಾಲಿನ ಕಬ್ಬು ನುರುಸುವಿಕೆಯನ್ನು ಅಕ್ಟೋಬರ 20ರಿಂದ ಪ್ರಾರಂಭಿಸಲಾಗುವುದು. ಆದ್ದರಿಂದ ಈ ಭಾಗದ ರೈತರು ತಮ್ಮ ಕಬ್ಬನ್ನು ಶ್ರೀ ದತ್ತ ಇಂಡಿಯಾ ಕಾರ್ಖಾನೆಗೆ ನುರಿಸಲು ಕಳುಹಿಸುವಂತೆ ವಿನಂತಿ ಮಾಡಿದರು. ಕಬ್ಬು ಬೆಳೆಗಾರರ ಕಬ್ಬಿನ ಬಿಲ್, ಕಟಾವು ಸಾಗಾಣಿಕೆಯ ಬಿಲ್ ಸರಕಾರದ ನಿಯಮದ ಪ್ರಕಾರ ಸರಿಯಾದ ವೇಳೆಗೆ ಮಾಡಲಾಗುವದೆಂದು ಹೇಳಿದ ಅವರು, ಪ್ರಸಕ್ತ ಸಾಲಿನಲ್ಲಿ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಎಂದರು..
ಕಾರ್ಯಕ್ರಮದಲ್ಲಿ ಕಂಪನಿಯ ಸಂಚಾಲಕ ಚೇತನ ಧಾರು, ರಾಜ್ಯ ಶಿಕರ್ ಬ್ಯಾಂಕಿನ ಸಂಚಾಲಕ ಅವಿನಾಶ್ ಮಹಾಗವಕರ್, ಆಡಳಿತ ಅಧಿಕಾರಿ ರವೀಂದ್ರ ಗಾಯಕವಾಡ, ಜನರಲ್ ಮ್ಯಾನೇಜರ (ಟೆಕ್ನಿಕಲ್) ಜಿತೇಂದ್ರ ಮೆಟಕರಿ, ಜನರಲ್ ಮ್ಯಾನೇಜರ (ಉತ್ಪಾದನೆ) ಶ್ರೀಕಾಂತ ಕುಂಭಾರ, ಜನರಲ್ ಮ್ಯಾನೇಜರ (ಕಬ್ಬು) ಅನಿರುದ್ಧ ಪಾಟೀಲ, ರವೀಂದ್ರ ಬಿರಾಜದಾರ, ವಿಜಯಕುಮಾರ ಹತ್ತೂರೆ, ಸುದರ್ಶನ ಕವಜಲಗಿ, ಸಂಗ್ರಾಮ್ ಸೂರ್ಯವಂಶಿ, ಧನಂಜಯ ಪಾಟೀಲ, ಸಚೀನ ನಿಕ್ಕಮ್, ಪ್ರವೀಣ ಜಾಧವ, ವಿನಾಯಕ ಪೂಜಾರಿ, ಮಹಮ್ಮದ ಹನಿಫ ನದಾಫ ಸೇರಿದಂತೆ ಕಾರ್ಖಾನೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು. ಸಮೀಪದ ಹಾವಿನಾಳ ಗ್ರಾಮದ ದತ್ತ ಇಂಡಿಯಾ ಶುಗರ್ ಸಕ್ಕರೆ ಕಾಖಾನೆಯಲ್ಲಿ ಸೋಮವಾರ ಘಟಸ್ಥಾಪನೆಯ ಮೂಹರ್ತದಲ್ಲಿ ಕಾರ್ಖಾನೆಯ ಬಾಯಲರ್ ಅಗ್ನಿ ಪ್ರದೀಪನ ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಶ್ಯಾಮಸುಂದರ್ ಶಾಸ್ತ್ರಿ ನೆರವೇರಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 