ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿಟಿಪಿ ಚಾಲನೆ
ಹೂವಿನಹಡಗಲಿ 06: ತಾಲೂಕಿನ ನಾನಾ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡಗಳ ಉದ್ಘಾಟನೆ, ಸಿಸಿ ರಸ್ತೆ ಭೂಮಿ ಪೂಜೆಯನ್ನು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ನೆರವೇರಿಸಿದರು.
ಪಟ್ಟಣದ ರುದ್ರಾಂಬ ಎಂ.ಪಿ.ಪ್ರಕಾಶ ಪ್ರಥಮ ದರ್ಜೆ ಕಾಲೇಜಿನಲ್ಲಿ 285 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಕೊಠಡಿಗಳು, 10ಲಕ್ಷ ವೆಚ್ಚದ ಆಡಿಟೋರಿಯಂ ಹಾಲ್ ಉದ್ಘಾಟಿಸಿ ಮಾತನಾಡಿದ ಅವರು ಕಾಲೇಜಿನ ಮೂಲ ಭೂತ ಸೌಲಭ್ಯಕ್ಕಾಗಿ ಸುಮಾರು 15ಕೋಟಿ ಖರ್ಚು ಮಾಡಲಾಗಿದ್ದು ಇದನ್ನು ಮಾದರಿ ಕಾಲೇಜು ನಿರ್ಮಿಸುವುದಾಗಿ ಹೇಳಿದರು.
ವಿನೋಬನಗರದಲ್ಲಿ 69 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, ಮಾಗಳದಲ್ಲಿ 1,70 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.ಹೊಳಲು-ಹ್ಯಾರಡಲಕ್ಕೆ 7.50 ಕೋಟಿ. ರೂವೆಚ್ಚದಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ ನಂತರ ಮಾತನಾಡಿ ಹೊಳಲು ಭಾಗಕ್ಕೆ ಅಗ್ನಿಶಾಮಕ ದಳ, ಪಟ್ಟಣ ಪಂಚಾಯ್ತಿ,ನದಿ ತೀರದಲ್ಲಿ ಪಂಪಸೆಟ್ಗಳ ಅವಶ್ಯವಾಗಿ ವಿದ್ಯುತ್ ಕಲ್ಪಿಸುವ ಭರವಸೆ ನೀಡಿದ ಅವರು ಶಕ್ತಿಮೀರಿ ನಿಮ್ಮ ಕೆಲಸ ಮಾಡುತ್ತೇನೆ. ನೀವು ನನಗೆ ಕೂಲಿ ಕೊಡಿ ಎಂದ ಅವರು ಮುಂದಿನ ಚುನಾವಣೆಯಲ್ಲಿ 500-1000 ನೋಟಿಗೆ ಆಮಿಷ ಆಗದೇ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಇನ್ನು ಹೆಚ್ಚಿನ ಅಭಿವೃದ್ದಿ ಮಾಡುವುದಾಗಿ ಹೇಳಿದರು.
ಪುರಸಭೆ ಅಧ್ಯಕ್ಷ ವಾರದಗೌಸಮೊಹಿದ್ದೀನ್,ಮುಖಂಡರಾದ ಅಟವಾಳಗಿ ಕೊಟ್ರೇಶ,ಬಸವಗೌಡಪಾಟೀಲ, ಬಿ.ಹನುಮಂತಪ್ಪ, ಚಂದ್ರನಾಯ್ಕ, ಸೊಪ್ಪಿನ ಮಂಜುನಾಥ,ಜಿ.ಪಂ.ಮಾಜಿ ಸದಸ್ಯ ವಸಂತ,ಪ್ರಾಚಾರ್ಯ ಸುರೇಶ ಇದ್ದರು.