ಧಾರವಾಡ ರುಡ್‌ಸೆಟ್ ಸಂಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ
Dr.D.Virendra Heggade, the deacon of Dharmasthala, visited the Dharwad Rudset Institute
ಧಾರವಾಡ 21: ರುಡ್‌ಸೆಟ್ ಸಂಸ್ಥೆ, ಗಾಂಧಿನಗರ, ಧಾರವಾಡದಲ್ಲಿ ಜರುಗುತ್ತಿರುವ ಮೃದು ಗೊಂಬೆ ತಯಾರಿಕೆ ತರಬೇತಿಯಲ್ಲಿ ಶಿಬಿರಾರ್ಥಿಗಳು ತಯಾರಿಸಿದ ಮೃದು ಗೊಂಬೆಗಳನ್ನು ರುಡ್‌ಸೆಟ್ ಸಂಸ್ಥೆಯ ಅಧ್ಯಕ್ಷರಾದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ, ಶಿಬಿರಾರ್ಥಿಗಳಿಗೆ ಮೃದು ಗೊಂಬೆ ತಯಾರಿಕೆ ಉದ್ಯಮಕ್ಕೆ ತುಂಬಾ ಬೇಡಿಕೆ ಇದ್ದು, ಭಾರತದಿಂದ ವಿದೇಶಕ್ಕೆ ಈ ಮೃದು ಗೊಂಬೆ ರಫ್ತಾಗುತ್ತಿದ್ದು ತಾವೂ ಸಹ ಉತ್ತಮ ರೀತಿಯಲ್ಲಿ ಉದ್ಯೋಗ ಮಾಡಿ ಜೊತೆಗೆ ಉದ್ಯಮದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಹೋದರೆ ಉದ್ಯಮದಲ್ಲಿ ಲಾಭವನ್ನು ಮಾಡಿಕೊಳ್ಳಬಹುದೆಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಉದ್ಯೋಗದ ಜೊತೆ ಪರಾ್ಯಯ ಉದ್ಯೋಗಗಳಾದ ಟೇಲರಿಂಗ, ಬ್ಯೂಟಿ ಪಾರ್ಲರ, ಕೃತಕ ಆಭರಣ ತಯಾರಿಕೆ ಇಂಥ ಉದ್ಯೋಗಗಳನ್ನು ಮಾಡಿ ಆದಾಯ ಮಾಡಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕರೆಕೊಟ್ಟರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜೀವನಧರಕುಮಾರ, ಎಸ್ ಡಿ ಎಮ್ ಇಂಜನೀಯರಿಂಗ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ ಚಕ್ರಸಾಲಿ, ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿಗಳಾದ ಜಗದೀಶ ಪೂಜಾರ, ಚನ್ನಪ್ಪ ದೇವಗಿರಿ, ಮಹೇಶ ಗೌಡರ, ಚಂದ್ರು ಕುರಕುಂದಿ, ತರಬೇತುದಾರರಾದ ರಶ್ಮೀ ಭಟ್ ಹಾಗೂ ಜಗದೀಶ ಬಾವಿಕಟ್ಟಿ ಹಾಜರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 