ಹೂವಿನ ಹಡಗಲಿ

ಸೇವಾಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ: ಡಾ.ಮಹೇಶ ಜೋಶಿ

ಸೇವಾಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ:  ಡಾ.ಮಹೇಶ ಜೋಶಿ

ಹೂವಿನಹಡಗಲಿ 02: ಕನ್ನಡ ಸಾಹಿತ್ಯ ಪರಿಷತ್ತು ಲಾಭದ ಉದ್ದೇಶ ಹೊಂದಿರುವ ವಾಣಿಜ್ಯ ಚಟುವಟಿಕೆಗಳಿಂದ  ಕೂಡಿದ ಸಂಸ್ಥೆಯಲ್ಲ ಇದು ಕನ್ನಡಿಗರ ಸಾರ್ವಭೌಮ ಪ್ರಾತಿನಿಧಿಕ ಸಂಸ್ಥೆಯಾಗಿದೆ ಈ ನಾಡಿನ ಸಾಹಿತ್ಯ, ಸಂಸ್ಕೃತಿ ನಾಡು ನುಡಿ ನೆಲ ಜಲದ ಸಂರಕ್ಷಣೆ ಪರಿಷತ್ತಿನ ಧ್ಯೇಯವಾಗಿದೆ ನಾನು ರಾಜ್ಯದ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ ನಿವೃತ್ತಿಯಾದ ಮೇಲೆ  ಪುನರ್ವಸತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತವನ ಎಂದು ನಾಡೋಜ ಮಹೇಶ ಜೋಶಿ ಹೇಳಿದರು. 

ಹೂವಿನಹಡಗಲಿ ಪಟ್ಟಣದ ರಂಗಭಾರತಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಪ್ರಾಮಾಣಿಕ ಕೆಲಸಗಾರನಾಗಿ ಕನ್ನಡದ ಪರಿಚಾರಕನಾಗಿ ಕಾರ್ಯನಿರ್ವಹಿಸಲು ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಬೇಕು ಪರಿಷತ್ತಿನ ಕಾರ್ಯ ಚಟುವಟಿಕೆಗಳು ಸಂಪೂರ್ಣ ಪಾರದರ್ಶಕವಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ ಮಾತನಾಡಿ ಮಹೇಶ ಜೋಷಿಯವರು ಕನ್ನಡ ನಾಡು ನುಡಿ ಕಟ್ಟಲು ವಿಭಿನ್ನ ಕನಸುಗಳನ್ನು ಕಂಡಿದ್ದಾರೆ  ತಮ್ಮ ಸೇವಾನುಭವದಲ್ಲಿ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಅದರಲ್ಲೂ  ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ವ್ಯಕ್ತಿ ಹಾಗಾಗಿ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ಮೇ 09 ರಂದು ನಡೆಯುವ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷದ ಸೇವಾಕಾಂಕ್ಷಿ ನಾಡೋಜ ಡಾ. ಮಹೇಶ ಜೋಶಿಯವರಿಗೆ ಮತವನ್ನು ಚಲಾಯಿಸಿ ಹೆಚ್ಚು ಮತದÀÀ ಅಂತರದಿಂದ ಗೆಲ್ಲಿಸಬೇಕು ಎಂದರು. 

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷ ಎಂ ಪಿ ಎಂ ಮಂಜುನಾಥ ಹಾಲಸ್ವಾಮಿ ಹಿರಿಯ ಕಸಾಪದ ಅಜೀವ ಸದಸ್ಯ ಬೀರಬ್ಬಿ ಬಸವರಾಜ, ನಭೀಸಾಬ್ ಕುಷ್ಠಗಿ, ಪತ್ರಕರ್ತ ಐಯ್ಯನಗೌಡ್ರು, ಚಂದ್ರಪ್ಪ, ಬಿಚ್ಚುಗತ್ತಿ ಖಾಜಾಹುಸೇನ್, ಅಶ್ವತ್ತ ನಾರಾಯಣ, ಕಸಾಪ ಗೌರವ ಕಾರ್ಯದರ್ಶಿ ಎಂ ಚಿದಾನಂದ, ಎಂ ದಯಾನಂದ, ಪಿ ಎಂ ಕೊಟ್ರುಸ್ವಾಮಿ, ಮಂಜುನಾಥ ಪಾಟೀಲ, ಮಾರುತೇಶ್ವರ ನಾಯಕ, ಗುರುಪ್ರಸಾದ. ನಾಗರಾಜ ಮಲ್ಕಿಒಡೆಯರ, ಶರಣು ಬಸವ ಕೋಟಗಿ, ಸುಭಾನಿ ಸಾಭ್ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿ ಓದಿ