ಡಾ. ಕೆ.ಎಫ್ ಕಮ್ಮಾರ ಹಾಗು ಡಾ. ಈಶ್ವರ ಆರ್ ಹೊಸಮನಿ ಅವರಿಗೆ ಸನ್ಮಾನ

ಡಾ. ಕೆ.ಎಫ್ ಕಮ್ಮಾರ ಹಾಗು ಡಾ. ಈಶ್ವರ ಆರ್ ಹೊಸಮನಿ ಅವರಿಗೆ ಸನ್ಮಾನ Dr. K.F. Kammara and Dr. Easwara R. Hosamani felicitated

ಲೋಕದರ್ಶನ ವರದಿ 

ಹುಬ್ಬಳ್ಳಿ 12: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕೆ ಎಂ ಸಿ ಆರ್‌.ಐ ಗೆ ತೆರಳಿ ನೂತನ ಕೆ ಎಂ ಸಿ ಆರ್ ಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಫಿಜಿಯಾಲಜಿ (ಶರೀರಶಾಸ್ತ್ರ) ವಿಭಾಗದ ಹಿರಿಯ ಪ್ರಾಧ್ಯಾಪಕ, ಮಾಜಿ ಪ್ರಾಂಶುಪಾಲ ಡಾ. ಕೆ. ಎಫ್ . ಕಮ್ಮಾರ ಅವರಿಗೆ ಹಾಗೂ ಕೆ ಎಂ ಸಿ ಆರ್ ಐ ನಿರ್ದೇಶಕರಾಗಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಿ ಸೇವಾ ನಿವೃತ್ತರಾದ, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಆರ್ ಹೊಸಮನಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ನೂತನ ನಿರ್ದೇಶಕರ ಅವಧಿಯಲ್ಲಿ ರೋಗಿಗಳಿಗೆ ಉತ್ಕೃಷ್ಟ ವೈದ್ಯಕೀಯ ಸೇವೆ ಲಭಿಸುವಂತಾಗಲಿ ಎಂದು ಹಾಗೂ ಮಾಜಿ ನಿರ್ದೇಶಕರ ನಿವೃತ ಜೀವನ ಸುಖಕರವಾಗಿ ಇರಲೆಂದು ಆಶಯ ವ್ಯಕ್ತಪಡಿಸಿದರು.