ಹೂವಿನ ಹಡಗಲಿ

ವೈದ್ಯರು ಕಣ್ಣಿಗೆ ಕಾಣುವ ದೇವರು: ಅಳವುಂಡಿ ಪೂಜ್ಯರು

ವೈದ್ಯರು ಕಣ್ಣಿಗೆ ಕಾಣುವ ದೇವರು: ಅಳವುಂಡಿ ಪೂಜ್ಯರು

ಹೂವಿನಹಡಗಲಿ 06: ವೈದ್ಯರು ಪ್ರಾಣ ಭಿಕ್ಷೆಯನ್ನು ನೀಡುವಂತರಾಗಿದ್ದು, ತಮ್ಮ ಪ್ರಾಣವನ್ನು ಪಣಕಿಟ್ಟು ಸೇವೆಯನ್ನು ಮಾಡಿ ಜೀವ ಉಳಿಸುವ ಕಣ್ಣಿಗೆ ಕಾಣುವ ದೇವರಾಗಿದ್ದಾರೆ ಎಂದು ಅಳವುಂಡಿಯ ಸಿದ್ದೇಶ್ವರ ಸಂಸ್ಥಾನ ಮಠದ ಷ.ಬ್ರ.ಶ್ರೀ.ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. 

ಅವರು ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಗವಿಮಠ ಮತ್ತು ಹಡಗಲಿಯ ಮಲ್ಲಿಗೆ ಯೋಗಾ ಚಾರಿಟೆಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಯೋಗಾ ಮತ್ತು ವೈದ್ಯಕೀಯ ಕುರಿತು ಮಾತನಾಡಿದ ಅವರು, ಯೋಗದಿಂದ ಮನಸನ್ನು, ಶರೀರವನ್ನು ಸುಸ್ತಿತಿಗೆ ಹೊಂದಲು ತರುವುದರ ಜೊತೆಗೆ ಪ್ರಕೃತಿದತ್ತವಾದ ಶಕ್ತಿ ಹೊಂದಲು ಸಹಕಾರಿಯಾಗಿದೆ, ಅಷ್ಟಾಂಗ ಯೋಗಾಸವನ್ನು ಮಾಡುವುದರಿಂದ ಜೀವಾತ್ಮವು ಒತ್ತಡಗಳನ್ನು ಮೀರಿ ಪಾರಮಾರ್ತಿಕ ಸ್ಥಿತಿಗೆ ಹೋಗುವ ಕ್ರಿಯೆಯಾಗಿದ್ದು, ಇಬ್ಬ ಸಾಮಾನ್ಯ ವ್ಯಕ್ತಿಯು ಸಹ ಮಹಾನ್ ವ್ಯಕ್ತಿಯಾಗಬಹುದು ಎಂದು ಅಷ್ಟಾಂಗ ಮಹತ್ವವನ್ನು ತಿಳಿಸುತ್ತಾ, ವೈದ್ಯರು ದೇವರ ಸಮಾನರಾಗಿದ್ದು, ಹಗಲಿರುಳು ಶ್ರಮಿಸಿ ರೋಗಿಗಳ ಸೇವೆಯನ್ನು ಮಡುತಿದ್ದಾರೆ, ಇಂತಹ ಸಂದರ್ಭದಲ್ಲಿ ಅವರನ್ನು ಗೌರವಿಸುವುದು ಓಚಿತ್ಯ ಪೂರ್ಣ ಎಂದು ಆಶೀರ್ವಚನ ನುಡಿ ನುಡಿದರು. ಸಾನಿಧ್ಯ ವಹಿಸಿದ ಹಿರೇಮಲ್ಲನಕೇರಿ ಮಠದ ಅಭಿನವ ಚೆನ್ನಬಸವ ಮಹಾಸ್ವಾಮಿಗಳು, ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲ ವೀರ​‍್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 

ನರೇಗ ಯೋಜನೆಯ ಸಹಾಯಕ ನಿದೇರ್ಶಕ ಯು.ಎಚ್‌.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟನೆ ನುಡಿ ನುಡಿದರು. ಮಲ್ಲಿಗೆ ಯೋಗಾ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಪಿಐ ರಮೇಶ್ ಕುಲಕರ್ಣಿ, ವೈದ್ಯಾಧಿಕಾರಿ  ಡಾ ಬಿ.ಶಿವಕುಮಾರ್, ಆರ್‌.ಟಿ.ಐ ಕಾರ್ಯಕರ್ತ ಎ.ಎಂ.ಪಿ.ವಾಗೀಶ್, ಟಿ.ಹೆಚ್‌.ಓ. ಡಾ. ಶಿವಕುಮಾರ್ ಸಾಲಿಗೇರಿ, ಕ.ರಾ.ನೌ. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ.ಎಂ.ಅಶೋಕ್,  ಡಾ. ಕೊಟ್ರಮ್ಮ, ವರ್ತಕ ಲಲಿತ್ ಕುಮಾರ್ ಜೈನ್ ಅತಿಥಿ ನುಡಿ ನುಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಯು.ಹಾಲೇಶ್, ಯೋಗಾ ಗುರುಗಳಾದ  ಎಂ.ಬಸವರಾಜ್, ಎ.ಗುರುಸಿದ್ದಪ್ಪ ಉಪಸ್ಥಿತರಿದ್ದರು. 

ಡಾ. ಮಲ್ಲಿಕಾರ್ಜುನ ಗೌಡ,  ಡಾ. ಬಿ.ಟಿ.ಫಣಿರಾಜ್, ಡಾ. ಬಿ.ಶಿವಕುಮಾರ್, ಡಾ. ನಾಗನಗೌಡ, ಡಾ. ಶಿವಕುಮಾರ್ ಸಾಲಿಗೇರಿ, ಡಾ.  ಆನಂದ್, ಡಾ. ಸಂದೀಪ್, ಡಾ.  ಪ್ರಕಾಶ್ ಅಟವಾಳಗಿ, ಡಾ. ಉಮೇಶ್‌.ಜೆ.ಡಿ., ಡಾ.  ಕೆ.ಸೋಮಶೇಖರ್, ಡಾ. ಕೊಟ್ರಮ್ಮ, ಡಾ. ಭಾರತಿ ಶಿವಕುಮಾರ್, ಡಾ. ರಮ್ಯಾ ಉಮೇಶ್, ಡಾ. ರಿನ್ಸಿ ಸೆಲ್ವಸ್ಟಿನ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎ.ಗುರುಸಿದ್ದಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿದರು, ಮಾದೇಶ್ವರ.ಕೆ ಸ್ವಾಗತಿಸಿದರು, ಉಪನ್ಯಾಸಕಿ ಎಂ.ನಾಗವೇಣಿ ನಿರೂಪಿಸಿದರು. 


ಸುದ್ದಿ ಓದಿ