ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಭೇಟಿ
ಲೋಕದರ್ಶನ ವರದಿ
ಹೂವಿನಹಡಗಲಿ 24: ಈಚೆಗೆ ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ ಬೆಳೆಗಳು ಮತ್ತು ಮನೆತಗಳು ಹಾನಿಯಾಗಿದ್ದರಿಂದ ತಾಲೂಕಿನ ಹೊಳಗುಂದಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಭೇಟಿ ನೀಡಿ ಪರೀಶೀಲಿಸಿದರು.
ಭಾರಿ ಮಳೆಗೆ ನದಿ ತೀತರ ಹಳ್ಳಿಗಳಲ್ಲಿ ಭತ್ತ ,ಬಾಳೆ ನೆಲಕಚ್ಚಿದೆ. ಮನೆಗಳು ಹಾನಿಯಾಗಿವೆ.11 ಜಾನುವಾರುಗಳು ಮಳೆಯಿಂದ ಮೃತಪಟ್ಟಿವೆ. ಇಲಾಖೆಯ ಅಧಿಕಾರಿಗಳು ,ಗ್ರಾಮಸ್ಥರು, ರೈತರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಕೊಡಬೇಕು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.
ಹೊಳಗುಂದಿಯಲ್ಲಿ ಈರುಳ್ಳಿ, ಮೆಣಸಿನಕಾಯಿ ಬೆಳೆಯ ಹಾನಿಯನ್ನು ವೀಕ್ಷಣೆ ನಂತರ ಗ್ರಾಮದಲ್ಲಿ ಮನೆಗಳು ಹಾನಿಯನ್ನು ಪರೀಶೀಲಿಸಿ ಅಧಿಕಾರಿಗಳಿಗೆ ವರದಿ ಕೊಡಲು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಮಹೇಂದ್ರ, ಜಿಲ್ಲಾ ಪಂಚಾಯ್ತಿ ಅಧಿಕಾರಿ, ತಾ.ಪಂ.ಇಒ ಇದ್ದರು.