ಹೂವಿನ ಹಡಗಲಿ

ಮಠ ಮಾನ್ಯಗಳಿಂದ ಧರ್ಮ ಜಾಗೃತಿ: ಸುಮಾ

ಮಠ ಮಾನ್ಯಗಳಿಂದ ಧರ್ಮ ಜಾಗೃತಿ: ಸುಮಾ

ಲೋಕದರ್ಶನ ವರದಿ

ಹೂವಿನ ಹಡಗಲಿ 19: ಮಠ ಮಾನ್ಯಗಳು ಧರ್ಮ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸುಖ, ಸಮೃದ್ದಿ ಜತೆಗೆ ಮಾನಸಿಕ ನೆಮ್ಮದಿ ನೀಡುತ್ತಿವೆ ಎಂದು ರಂಗಭಾರತಿ ಅಧ್ಯಕ್ಷೆ ಎಂಪಿ ಸುಮಾವಿಜಯ ಹೇಳಿದರು. 

ಪಟ್ಟಣದ ಗವಿಮಠದಲ್ಲಿ ನಡೆದ ಲಿಂ.ಲಿಂಗೇಶ್ವರ ಸ್ವಾಮೀಜಿಗಳ 20ನೇ ವರ್ಷದ ಪುಣ್ಯಸ್ಮರಣೋತ್ಸವ, 172ನೇ ಮಾಸಿಕ ಶಿವಾನುಭವ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಕೊಠಡಿ ಉದ್ಘಾಟಿಸಿ ಮಾತನಾಡಿ ಹಿರಿಶಾಂತವೀರಸ್ವಾಮೀಜಿ ಯಾವುದೇ ಜಾತಿ,ಧರ್ಮಕ್ಕೆ ಸೀಮತವಾಗದೇ ದಾನಿಗಳ ನೆರವಿನಿಂದ ಮಠ ಅಭಿವೃದ್ದಿ ಪಡಿಸಿದ್ದಾರೆ ಜತೆಗೆ ಮಠದಲ್ಲಿ ಮಕ್ಕಳಿಗೆ ಕಲಿಕೆಗೆ ಪ್ರತ್ಯೇಕ ಕೊಠಡಿ,ಪುಸ್ತಕ ಸಂಗ್ರಹವನ್ನು ಮಾಡಿದ್ದಾರೆಂದು ಶ್ಲಾಘಿಸಿದರು.

ಮಠದಲ್ಲಿ ಶ್ರೀಗಳು ಮಕ್ಕಳಿಗೆ ಧಾರ್ಮಿಕ  ಸಂಸ್ಕಾರವನ್ನು ನೀಡಿದ್ದಾರೆ ಜತೆಗೆ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂಗ್ಲೀಷ, ಕಂಪ್ಯೂಟರ್ ಜ್ಞಾನ ಅತ್ಯವಶ್ಯವಾಗಿದೆ ಇದಕ್ಕೆ ನಾನು ಸಹಕಾರ ನೀಡುವುದಾಗಿ ಹೇಳಿದರು.

ವ್ಯೆದ್ಯಾಧಿಕಾರಿ ಡಾ.ಶಿವಕುಮಾರ ಮಾತನಾಡಿ ಇಂದಿನ ಯಾಂತ್ರಿಕ ಜೀವನದಲ್ಲಿ ಮಠ-ಮಾನ್ಯಗಳು ಮಾನಸಿಕ ನೆಮ್ಮದಿ,ಧಾರ್ಮಿಕ  ಸಂಸ್ಕಾರವನ್ನು ಕೊಡುವ ಕೇಂದ್ರಗಳಾಗಿವೆ ಎಂದರು.ಮುಂಡರಗಿ ಪ್ರಭಾವತಿ,ವೀರಭದ್ರಯ್ಯ ಶಾಸ್ತ್ರೀ ಮಾತನಾಡಿದರು. ಗವಿಮಠದ ಡಾ. ಹಿರಿಶಾಂತವೀರಸ್ವಾಮೀಜಿ ದಾನಿಗಳ ನೆರವುನಿಂದ ಗವಿಮಠ ಅಭಿವೃದ್ದಿಯಾಗಿದೆ ಎಂದ ಅವರು ಲಿಂಗೇಶ್ವರ ಸ್ವಾಮೀಜಿಗೆ ನುಡಿ ನಮನ ಸಲ್ಲಿಸಿದರು.

ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಗುರುಶಾಂತ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಾಚನ ನೀಡಿದರು. ಈ ವೇಳೆ ಗೃಹರಕ್ಷಕದಳದ ಕಮಾಂಡರ್ ಕೆ.ರಾಜಪೀರ ಅವರಿಗೆ ಲಿಂಗೇಶ್ವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಜತೆಗೆ ವಿದ್ಯಾರ್ಥಿ ಗಳ ಅಧ್ಯಯನ ಕೊಠಡಿ ದಾನಿಗಳನ್ನು ಸನ್ಮಾನಿಸಲಾಯಿತು. ಶಂಕ್ರಯ್ಯ, ಮಾನಸ ಸಂಗಡಿಗರಿಂದ ವಚನ ಗಾಯನ ಗಮನ ಸೆಳೆಯಿತು.

 

ಸುದ್ದಿ ಓದಿ