ದೇಶನೂರ ಗ್ರಾಮ ಕಳ್ಳಭಟ್ಟಿ ಸಾರಾಯಿ ಮುಕ್ತ ಕಾರ್ಯಕ್ರಮ
Deshanura village illegal liquor free program
ನೇಸರಗಿ 08: ಸಮೀಪದ ದೇಶನೂರ ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ಮುಕ್ತ ಮಾಡುವಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಬೈಲಹೊಂಗಲ ಅಬಕಾರಿ ನೀರೀಕ್ಷಕ ಅಧಿಕಾರಿ ಶ್ರೀಶೈಲ ಅಕ್ಕಿ ಹೇಳಿದರು.
ಬುಧವಾರ ಸಮೀಪದ ದೇಶನೂರು ಗ್ರಾಮದಲ್ಲಿ ಕಳ್ಳಭಟ್ಟಿ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ಆರೋಗ್ಯ ಮತ್ತು ಉತ್ತಮ ಜೀವನದ ಹಿತದೃಷ್ಟಿಯಿಂದ ಸಾರಾಯಿ, ಕಳ್ಳಭಟ್ಟಿ ಮುಂತಾದವುಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಕಳ್ಳಭಟ್ಟಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.
ಜನರ ಪೌಷ್ಟಿಕತೆ ಮಟ್ಟ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ವಿಶೇಷ ಓಷಧಿ ತಯಾರಿಸಲಾಗುತ್ತಿದೆ. ಜನರು ನೆಮ್ಮದಿಯ ಜೀವನದಿಂದ ವಿಮುಖವಾಗದಿರಲಿ ಎಂಬ ಉದ್ದೇಶದಿಂದ ಕಳ್ಳಭಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಸೇಂದಿ ಮುಂತಾದವುಗಳನ್ನು ತಯಾರಿಸುವುದು ಮತ್ತು ಮಾರುವುದು ನಿಷೇಧಿಸಲಾಗಿದೆ ಎಂದು ಹೇಳಿದರು.
ಪಿಡಿಓ ಅಯ್.ಆರ್.ಪೋಲಿಸನವರ, ನೇಮಣ್ಣ ಟಗರಿ, ಎಂ.ಬಿ.ಮುಲ್ಲಾ, ಸಂತೋಷ ತಲ್ಲೂರ, ರಾಘವೇಂದ್ರ ಹಳ್ಳದ, ಕುಮಾರ ಕೆಳಗಿನಮನಿ, ಶಶಿಕಲಾ ತಳವಾರ, ರಂಗೋಜಿ ಕಂಚಿಮರದ, ಸುನಿತಾ ಕಂಚಿಮರದ, ಅಡಿವೆಪ್ಪ ಕಮತಗಿ, ಸಂತೋಷ ಬೀರಣ್ಣವರ, ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 