ಕಲಾವಿದೆ, ನೇಕಾರರ ಮಹಿಳಾ ನಾಯಕಿ ಡಾ.ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಕಲಾವಿದೆ, ನೇಕಾರರ ಮಹಿಳಾ ನಾಯಕಿ ಡಾ.ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ Demand to give ministerial position to artist and female leader of weavers Dr. Umashree

ಲೋಕದರ್ಶನ ವರದಿ 

ಮಹಾಲಿಂಗಪುರ   06:   ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ, ಮಾಜಿ ಶಾಸಕಿ ಹಾಗೂ ಖ್ಯಾತ ಕಲಾವಿದೆ ಡಾ.ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಸುದೀರ್ಘ ಸಾರ್ವಜನಿಕ ಸೇವೆಯನ್ನು ಗೌರವಿಸಬೇಕು ಎಂದು ವಿವಿಧ ಮುಖಂಡರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಯಲ್ಲಣ್ಣಗೌಡ ಪಾಟೀಲ, ಡಾ.ಉಮಾಶ್ರೀ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಮನೆಮಾತಾಗಿರುವ ಕಲಾವಿದೆಯಾಗಿದ್ದು, ನಂತರ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಜನಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ತೇರದಾಳ ಕ್ಷೇತ್ರದ ಶಾಸಕಿ ಹಾಗೂ ಸಚಿವೆಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು ಎಂದು ಹೇಳಿದರು. 

ಇನ್ನೋರ್ವ ಮುಖಂಡ ವಿಠ್ಠಲ ಹೊಸಮನಿ , ಮಾತನಾಡಿ, ಡಾ.ಉಮಾಶ್ರೀ ಅವರು ಕೇವಲ ರಾಜಕಾರಣಿಯಲ್ಲ, ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ನಾಯಕಿಯಾಗಿದ್ದಾರೆ. ಬಡವರು, ರೈತರು, ಮಹಿಳೆಯರು ಹಾಗೂ ಕಾರ್ಮಿಕರ ಪರ ಸದಾ ಧ್ವನಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಕಷ್ಟದ ದಿನಗಳಲ್ಲಿಯೂ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ನಗರ ಮುಖಂಡ ಶ್ರೀಪಾದ ಗುಂಡಾ ಮಾತನಾಡಿ, ಡಾ.ಉಮಾಶ್ರೀ ಅವರು ನೇಕಾರ ಸಮುದಾಯದ ಹೆಮ್ಮೆಯ ಮಹಿಳಾ ನಾಯಕಿಯಾಗಿದ್ದಾರೆ. ನೇಕಾರರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ನೇಕಾರ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಉದ್ಯೋಗ ಮತ್ತು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ನೇಕಾರ ಸಮುದಾಯಕ್ಕೆ ಪ್ರಬಲ ಧ್ವನಿಯಾಗಿರುವ ಕೆಲವೇ ನಾಯಕರಲ್ಲಿ ಉಮಾಶ್ರೀ ಅವರು ಪ್ರಮುಖರು ಎಂದು ಹೇಳಿದರು. 

ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ ಹಾಗೂ ಮಾಜಿ ಸಚಿವೆಯಾಗಿರುವ ಉಮಾಶ್ರೀ ಅವರು ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸರಳ ವ್ಯಕ್ತಿತ್ವದ ನಾಯಕಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಕಲಾವಿದೆಯಾಗಿ ಹೆಸರು ಮಾಡಿದ್ದರೂ, ರಾಜಕೀಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿಶಿಷ್ಟ ಸ್ಥಾನಮಾನ ಗಳಿಸಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ ಪ್ರೇರಣೆಯಾಗಿರುವ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. 

ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಿದರೆ ಮಹಿಳೆಯರು, ಕಲಾವಿದರು, ನೇಕಾರರು ಹಾಗೂ ಹಿಂದುಳಿದ ವರ್ಗಗಳ ಆಶೋತ್ತರಗಳಿಗೆ ಇನ್ನಷ್ಟು ಬಲ ದೊರೆಯಲಿದೆ.ಆದ್ದರಿಂದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅವರು ಉಮಾಶ್ರೀ ಅವರ ಅನುಭವ, ಜನಪರ ಸೇವೆ ಮತ್ತು ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಈಶ್ವರ ಚಮಕೇರಿ,ಮುಸ್ತಾಕ ಚಿಕ್ಕೋಡಿ,ವಿಠ್ಠಲ ಸಂಶಿ,ರಾಜು ಭಾವಿಕಟ್ಟಿ ,ಉಮೇಶ ಪೂಜಾರಿ ,

ಅರ್ಜುನ ದೊಡಮನಿ,ನಾನಾ ಜೋಶಿ ,ಲಕ್ಷ್ಮಣ ಮಾಂಗ, ವಿನೋದ ಸಿಂಪಿ, ರವಿ ಬಿದರಿ ,ವಿಠ್ಠಲ ಕುಳಲಿ,ಆನಂದ ಬಂಡಿ ,ಜ್ಯೋತ್ಯಪ್ಪ ಕಪರಟ್ಟಿ,ಶಂಕರ ಮುಗಳಕೋಡ , ಪರಶುರಾಮ ಮೇತ್ರಿ, ಶಂಕರ ಸೊನ್ನದ ,ಸಿದ್ದು ಬೆನ್ನೂರ,ಸಿಂಧೂರ ಹಲಶಪ್ಪಗೊಳ, ಅನಿಲ ದೇಸಾಯಿ ,ಜೀತು ಕೇಸರಗೊಪ್ಪ , ಸಿದ್ದು ಬೂಸುನೂರ, ಚಂದ್ರು ಕಾಗಿ, ಮುದುಕಪ್ಪ ನಾಗನೂರು, ಮಂಜು ಭಾವಿಕಟ್ಟಿ , ಶ್ರೀಶೈಲ ಮುಗಳಕೋಡ, ಮಂಜು ಕಲಾಲ, ಮಹಾಲಿಂಗ ಹಾವನಳ್ಳಿ , ರಮೇಶ ನಾಗರಾಳ , ಮಹಾಲಿಂಗಪ್ಪ ಬಳಗಾರ , ಈರ​‍್ಪ ಸೊನ್ನದ , ಬಸವರಾಜ ಕಂಪು , ಅಶೋಕ ತೆಳಗಡೆ, ಸೇರಿದಂತೆ ಇತರರಿದ್ದರು.