ಗಂಗಾವತಿಯ ಗಡ್ಡಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚದಿರಲು ಆಗ್ರಹ. ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ
Demand not to close the government school in Gaddi village of Gangavathi. Protest led by AIDSSO
ಗಂಗಾವತಿ 28: ಗಂಗಾವತಿಯ ಗಡ್ಡಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚದಿರಲು ಆಗ್ರಹ. ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ಽ ಕೆಪಿಎಸ್ ಯೋಜನೆಗೆ ವಿದ್ಯಾರ್ಥಿಗಳು, ಪೋಷಕರ ವಿರೋಧ.ಕೆಪಿಎಸ್ ಮಾಗ್ನೆಟ್ ಯೋಜನೆ ವಿರೋಧಿಸಿ ಏಪ್ರಿಲ್ 10 ರಂದು ನಡೆಯಲಿರುವ ರಾಜ್ಯ ಮಟ್ಟದ ಜನಸಮಾವೇಶಕ್ಕೆ ಹೊರಡಲು ಜನರ ಸಿದ್ಧತೆ.ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಗ್ರಾಮದ ಬಸವಣ್ಣನ ಗುಡಿ ಹತ್ತಿರ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪೋಷಕರು ಪ್ರತಿಭಟನೆ ನಡೆಸಿದರುಈ ವೇಳೆ ಮಾತನಾಡಿದ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿಂಧು ಕೌದಿ ಮಾತನಾಡಿ ದೇಶದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ದುಡಿದು, ಶೋಷಿತರಿಗೆ,ದಲಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿಯ ಹರಿಕಾರರಾದರು.
ಭಗತ್ ಸಿಂಗ್, ನೇತಾಜಿ ಅವರು ಸ್ವಾತಂತ್ರ್ಯ ನಂತರ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಾರಿದರು. ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಬಡ ಮಕ್ಕಳಿಂದ ಶಿಕ್ಷಣವನ್ನು ಕಿತ್ತುಕೊಂಡು, ಸಮಾಜವನ್ನು ಇನ್ನಷ್ಟು ಕತ್ತಲೆ ಕೋಣೆಯಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿರದರು. ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ ವಾಗಿದೆ, ಇಲ್ಲಿ ಯಾವುದೇ ಶಿಕ್ಷಣದ ಕಾನೂನು ತರಬೇಕಾದರೆ ನಮ್ಮ ಜನರ ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡು ನೀತಿ ತರಬೇಕು, ಆದರೆ ಯಾವುದೇ ಪ್ರಜಾಸತಾತ್ಮಕ ಪ್ರಕ್ರಿಯೆ ಇಲ್ಲದೆ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ 2,500 ಕೋಟಿ ಸಾಲವನ್ನು ತಂದು ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ರಾಜ್ಯದಲ್ಲಿ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಗಡ್ಡಿ ಶಾಲೆಯೂ ಕೂಡ ಈ ಪಟ್ಟಿಯಲ್ಲಿದೆ. ಈಗ ನಾವೆಲ್ಲರೂ ಒಗ್ಗಟ್ಟಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಜನ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು. ಹಾಗೂ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿರುವ ಎಲ್ಲಾ ಸರ್ಕಾರಗಳ ವಿರುದ್ಧ ಜಾತಿ, ಧರ್ಮ ಬೇಧಭಾವವಿಲ್ಲದೆ ಒಂದಾಗಿ ಮತ್ತೊಂದು ನವೋದಯ ಚಳವಳಿ ಕಟ್ಟಲು ಮುಂದಾಗ ಬೇಕು, ಏಪ್ರಿಲ್ ತಿಂಗಳ 10 ನೇ ತಾರೀಕಿನಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜನ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಆಗ್ರಹಿಸೋಣ ಎಂದು ಕರೆ ನೀಡಿದರು.ಊರಿನ ಹಿರಿಯರಾದ ಸಂಗನಗೌಡ ಪಾಟೀಲ್ ಮಾತನಾಡಿ ಗಡ್ಡಿಯಲ್ಲಿ ಬಡವರಿಗೆ ಇರುವುದು ಒಂದೇ ಸರ್ಕಾರಿ ಶಾಲೆ. ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 12 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಹೆಚ್ಚು ಬಡವರ ಮಕ್ಕಳು ದಾಖಲಾತಿ ಇರುವ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ.
ನಮ್ಮೂರಿಗೆ ಸರಕಾರಿ ಶಾಲೆ ಬರುವುದಕ್ಕೆ ನಮ್ಮ ಹಿರಿಯರು ತುಂಬಾ ಶ್ರಮ ಪಟ್ಟಿದ್ದಾರೆ. ನಮ್ಮೂರಿನ ಶಾಲೆ ನಾವೆಲ್ಲರೂ ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಎಲ್ಲಾ ಮಾಹಾತ್ಮರ ಕಾರ್ಯಕ್ರಮಗಳನ್ನು ಭಾವೈಕ್ಯತೆಯಿಂದ ಆಚರಿಸಲು ಇರುವಂತಹ ಏಕೈಕ ಜ್ಞಾನದ ದೇವಾಲಯದಂತೆ ಅಂತಹ ನಮ್ಮೂರಿನ ಶಾಲೆಯನ್ನು ಮುಚ್ಚಿ ನಾವೆಲ್ಲ ನಮ್ಮ ಮಕ್ಕಳನ್ನು ಬೇರೆ ಊರಿನ ಶಾಲೆಗೆ ಕಳಿಸೋಕೆ ಸಾಧ್ಯವಿಲ್ಲ, ನಾವೆಲ್ಲರೂ ಒಂದಾಗಿ ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳುತ್ತೇವೆ, ಶಿಕ್ಷಣಾಧಿಕಾರಿಗಳು ನಮ್ಮ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟನೇ ಕೊಡಬೇಕು ಹಾಗೇ ಶಾಲೆ ಮುಚ್ಚುವ ಇಂತಹ ಕೆಪಿಎಸ್ ಮಾಗ್ನೆಟ್ ಯೋಜನೆ ಸರಕಾರ ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಊರಿನ ಯುವಜನ ಸಂಘಟನೆಯ ಮುಖಂಡರಾದ ಶರಣು ಪಾಟೀಲ್ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ಚನ್ನಬಸವ ಕುಂಬಾರ್ ಕಾರ್ಯದರ್ಶಿಯಾದ ಹನುಮೇಶ್ ವೀರಯ್ಯ ಹಿರೇಮಠ್, ಉಪಾಧ್ಯಕ್ಷರಾದ ಸುರೇಶ್ ಗಡ್ಡಿ , ಬಸವರಾಜ್ ತಳವಾರ್, ಖಆಒಅ ಅಧ್ಯಕ್ಷರಾದ ಫಕೀರ್ಪ ಪೂಜಾರ್ ಸದಸ್ಯರಾದ ಗಂಗಮ್ಮ ಉಪ್ಪಾರ್, ಹನುಮಂತಪ್ಪ,ಮುತ್ತಣ್ಣ, ತಿಮ್ಮಣ್ಣ, ನೀಲಮ್ಮ, ನಾಗವ್ವ ಉಪ್ಪಾರ,ರೆನ್ನಮ್ಮ, ದುರ್ಗಮ್ಮ,ಬಾಲಪ್ಪ ಮಾದಿನಾಳ್, ಗಣೇಶಯ್ಯ ಸ್ವಾಮಿ, ಯಮನೂರ್ ಉಪ್ಪಾರ್, ರಜೀಯಾ ಬೇಗಂ, ದ್ಯಾಮಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 