ಕಬ್ಬು ಸಾಗಿಸುವ ವಾಹನಗಳಿಗೆ ರೇಡಿಯಂ ಅಳವಡಿಸಲು ಕರವೇ ಆಗ್ರಹ
Demand for installing radium in sugarcane-carrying vehicles
ಕಾಗವಾಡ, 29 : ತಾಲೂಕಿನ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ರೈತರು, ಟ್ರ್ಯಾಕ್ಟರ್ ಮತ್ತು ಲಾರಿ ಮಾಲೀಕರು ಮತ್ತು ಚಾಲಕರು ಕಾರ್ಖಾನೆಗಳಿಗೆ ಕಬ್ಬು ಸಾಗಾಟ ಮಾಡುವಾಗ ತಮ್ಮ ವಾಹನಗಳಿಗೆ ಹಿಂದುಗಡೆ ಕಡ್ಡಾಯವಾಗಿ ರೆಡಿಯಂ ಬಾವುಟಗಳನ್ನು ರೆಡಿಯಂ ಸ್ಟಿಕರ್ಸ್‌ಗಳನ್ನು ಅಳವಡಿಸಬೇಕೆಂದು ಕರವೇ ತಾಲೂಕ ಉಪಾಧ್ಯಕ್ಷ ಗಣೇಶ ಕೋಳೆಕರ್ ಆಗ್ರಹಿಸಿದ್ದಾರೆ.
ಅವರು, ಶುಕ್ರವಾರ ದಿ. 28 ರಂದು ಪಟ್ಟಣದ ಶಿರಗುಪ್ಪಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ಅರುಣ ಪರಾಂಡೆ ಹಾಗೂ ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ಕಬ್ಬು ಸಾಗಿಸುವ ಟ್ಯಾಕ್ಟರ್, ಎತ್ತಿನ ಬಂಡಿ, ಲಾರಿಗಳ ಹಿಂಬದಿಯಲ್ಲಿ ರೇಡಿಯಂ ಸಿಕ್ಟರ್ ಅಳವಡಿಸುವುದರಿಂದ, ಹಿಂದಿನಿಂದ ಬರುವ ವಾಹನಗಳಿಗೆ ಕಬ್ಬು ಸಾಗಿಸುವ ವಾಹನಗಳು ಸರಿಯಾಗಿ ಕಾಣುವುದರಿಂದ ಅಪಘಾತ ಆಗುವುದಿಲ್ಲ. ಆದಕಾರಣ ಸಕ್ಕರೆ ಕಾರ್ಖಾನೆಯವರು ಮತ್ತು ಟ್ಯಾಕ್ಟರ್-ಲಾರಿ ಮತ್ತು ಎತ್ತಿನ ಬಂಡಿಗಳಿಗೆ ರೆಡಿಯಂ ಸ್ಟಿಕರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಸಿದ್ದು ಒಡಿಯರ್, ಉಪಾಧ್ಯಕ್ಷ ಗಣೇಶ ಕೋಳೆಕರ, ಅಸ್ಲಂ ಜಮಾದಾರ, ಅಪ್ಪಾಲಾಲ ಜಮಾದಾರ, ಫಾರೂಕ್ ಅಲಾಸ್ಕರ, ಸಚೀನ ಗಾವಡೆ, ಬಾಬಾಸಾಹೇಬ ಕೊಟ್ಟಲಗೆ, ಹಸನ ಪಾನಾರೆ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 