ಶಾಲಾ ಕೌಂಪೌಂಡ್ ಪ್ಲಾಸ್ಟರ್ ಮಾಡುವ ಸ್ಥಳಕ್ಕೆ ಡಿಡಿಪಿಐ ಭೇಟಿ,ಸೇವಾ ಕಾರ್ಯ ಮೆಚ್ಚುಗೆ
DDPI visits school compound plastering site, appreciates service
ಕೊಪ್ಪಳ 22 : ತಾಲೂಕಿನ ಬಹದ್ದೂರಬಂಡಿ ಗ್ರಾಮದ ಹಳೆಯ ವಿದ್ಯಾರ್ಥಿಳು,ಶಿಕ್ಷಕರು ಸೇರಿಕೊಂಡು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕೌಂಪೌಂಡ್ ಕಟ್ಟುವ ಹಾಗೂ ಪ್ಲಾಸ್ಟರ್ ಕಾರ್ಯವು ಮೂರನೇಯ ದಿನ ಕೂಡಾ ಮುಂದುವೆರದಿದೆ.ಈ ಒಂದು ಕಾರ್ಯದ ಬಗ್ಗೆ ಮಾಹಿತಿ ಪಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಅವರು ಸೋಮವಾರ ಕೆಲಸ ಮಾಡುವ ಸ್ಥಳಕ್ಕೆ ಸ್ವಯಂ ಪ್ರೇರಿತವಾಗಿ ಭೇಟಿ ನೀಡಿದರು.
ಈ ಸಮಯದಲ್ಲಿ ಉಪನಿರ್ದೇಶಕರಾದ ಸೋಮಶೇಖರಗೌಡ ಅವರು ಮಾತನಾಡಿ,ಬಹದ್ದೂರಬಂಡಿ ಶಾಲಾ ಕೌಂಪೌಂಡ ಎತ್ತರ ಮಾಡುವ ಹಾಗೂ ಅದರ ಪ್ಲಾಸ್ಟರ್ ಮಾಡುವ ಕಾರ್ಯವನ್ನು ಸತತವಾಗಿ ಮೂರನೇಯ ದಿನವು ಕೂಡಾ ಹಳೆಯ ವಿಧ್ಯಾರ್ಥಿಗಳು,ಶಿಕ್ಷಕರು ಗ್ರಾಮದವರು ಮುಂದುರೆಸಿದ್ದು,ಅಲ್ಲದೇ ಈ ಕಾರ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ದೇಣಿಗೆ ನೀಡಿರುವ ಕಾರ್ಯ ಶ್ಲಾಘನೀಯ ಜೊತೆಯಲ್ಲಿ ಇತರರಿಗೆ ಮಾದರಿಯಾಗುವ ಕಾರ್ಯವಾಗಿದೆ.ಶಿಕ್ಷಣ ಇಲಾಖೆಯ ಅಭಿವೃದ್ದಿ ಕೇವಲ ಇಲಾಖೆಯಿಂದ ಮಾತ್ರ ಸಾಧ್ಯದಿಲ್ಲ.ಸಮುದಾಯದ ಸಹಬಾಗಿತ್ವದಲ್ಲಿ ಮಾಡಿದರೆ ಮಾತ್ರ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ.ಇಂತಹ ಸಮುದಾಯದ ಸಹಬಾಗಿತ್ವದ ಕಾರ್ಯ ಬಹದ್ದೂರಬಂಡಿ ಗ್ರಾಮ ಶಾಲಾ ಕೌಂಪೌಂಡ ಎತ್ತರ ಮಾಡುವ ಕಾರ್ಯದಲ್ಲಿ ಕಾಣಬಹುದಾಗಿದೆ,ಇಂತಹ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ಮನಸ್ಸುಗಳಿಗೆ ಇಲಾಖೆಯ ಪರವಾಗಿ ಕೃತಜ್ಞತೆಗಳನ್ನು ತಿಳಿಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ,ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ,ಬಾಬಾ ಕಿಲ್ಲೇದಾರ,ಮೈಲಪ್ಪ ಕಂಬದಮನಿ,ದ್ಯಾಮವ್ವ ದೇವಿ ಕಮಿಟಿ ಅಧ್ಯಕ್ಷರಾದ ಶಿವಣ್ಣ ಗ್ಯಾನಪ್ಪನವರ,ಗ್ರಾ,ಪಂ,ಸದಸ್ಯರಾದ ದಾದಾಪೀರ,ಶಿಕ್ಷಣ ಸಂಯೋಜಕರಾದ ವಿರೇಶ ಅರಳ್ಳಿಕಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ,ಮಾರುತಿ ಮುಂಡರಗಿ, ದರಿಯಾಸಾಬ ,ಬಾಬುಜಾನ, ಮೈಬೂಸಾಬ ಮುಲ್ಲಾ,ಪಾಯಣ್ಣ, ಕೋರೆನಾಯಕ, ಮುಸ್ತಾಫ ಮಾಲಿಪಾಟೀಲ,ಲಕ್ಷ್ಮಣ್ಣ ಮಡಿವಾಳರ, ಮೌಲಾಸಾಬ ಕಲೀಫ್ ಮುಂತಾದವರು ಹಾಜರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 