ತಡರಾತ್ರಿವರೆಗೆ ಬ್ಯಾಂಕಗೆ ಬೀಗ ಹಾಕಿ ಗ್ರಾಹಕರ ಪ್ರತಿಭಟನೆ
Customers protest by locking the bank until late at night
ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣ: ಜಗ್ಗದ ಗ್ರಾಹಕರು, ಬಗ್ಗದ ಬ್ಯಾಂಕ್
ಲೋಕದರ್ಶನ ವರದಿ
ಚಡಚಣ 12: ಕಳೆದ ವರ್ಷ ಸೆ. 16ರಂದು ಸ್ಥಳೀಯ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನ ಕಳೆದುಕೊಂಡ ಗ್ರಾಹಕರು ಬುಧವಾರ ಸಂಜೆ 4 ಗಂಟೆಯಿಂದ ತಡರಾತ್ರಿ 11 ಗಂಟೆಯವರೆಗೆ ಬ್ಯಾಂಕಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಚಿನ್ನ ಕಳೆದುಕೊಂಡ ಗ್ರಾಹಕರು ಬ್ಯಾಂಕಗೆ ಆಗಮಿಸಿ, ನಮಗೆ ಚಿನ್ನ ಅಥವಾ ಹಣ ನೀಡಲು ಬ್ಯಾಂಕ್ ನೀಡಿದ್ದ ಎಲ್ಲ ಗಡುವುಗಳು ಮುಗಿದಿದ್ದು, ನಮಗೆ ನಮ್ಮ ಚಿನ್ನ ಅಥವಾ ನಾವು ಅಡವಿಟ್ಟ ಚಿನ್ನಕ್ಕೆ ಇಂದಿನ ಮಾರುಕಟ್ಟೆ ಬೆಲೆಯನ್ನು ಈ ಕ್ಷಣವೇ ನೀಡಬೇಕು ಎಂದು ಪಟ್ಟು ಹಿಡಿದು ಬ್ಯಾಂಕ್ ಬಾಗಿಲಿಗೆ ಬೀಗ ಜಡಿದು ಬ್ಯಾಂಕ್ ಒಳಗಡೆ ತಡರಾತ್ರಿ 11 ಗಂಟೆ ವರೆಗೆ ಪ್ರತಿಭಟನೆ ನಡೆಸಿದರು.
2025ರ ಸೆಪ್ಟೆಂಬರ 16 ರಂದು ಬ್ಯಾಂಕ್ ದರೋಡೆಯಾಗಿದ್ದು, ಇದುವರೆಗೆ ತಮಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡೀ ಬ್ಯಾಂಕ್ ಒಳಗಡೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಂಟ್ರಿ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ಅಂದು ಬರೋಬ್ಬರಿ 1.5 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು 9 ತಿಂಗಳು ಕಳೆದರೂ ಲಾಕರ್ನಲ್ಲಿಟ್ಟಿದ್ದ ಹಾಗೂ ಸಾಲಕ್ಕಾಗಿ ಅಡವಿಟ್ಟಿದ್ದ ತಮ್ಮ ಚಿನ್ನದ ಒಡವೆಗಳು ವಾಪಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇ. 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂನ್ 10 ಕಳೆದರೂ ಬ್ಯಾಂಕ್ನಿಂದ ಯಾವುದೇ ಪರಿಹಾರ ಸಿಗದ ಕಾರಣ ಗ್ರಾಹಕರ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಪಿ.ಎಸ್.ಐ.ಸೊಮೇಶ ಗೆಜ್ಜಿ, ಸಿ.ಪಿ.ಐ. ಪರಶುರಾಮ ಮನಗೂಳಿ ಅವರು ಮಾತನಾಡಿ,
ಜೂ.15 ಸೋಮವಾರದಂದು ನಿಮ್ಮ ಚಿನ್ನಕ್ಕೆ ಸರಿಯಾದ ಮೊತ್ತ ನೀಡುತ್ತೇವೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಾರಣ ತಾವು ಸೋಮವಾರದ ವರೆಗೆ ತಾಳ್ಮೆಯಿಂದ ಇದ್ದು ತಮ್ಮ ಚಿನ್ನದ ಮೊತ್ತವನ್ನು ಪಡೆದುಕೊಳ್ಳಿ ಎಂದು ಹೇಳಿ, ಗ್ರಾಹಕರ ಮನವೊಲಿಸುವಲ್ಲಿ ಯಶಸ್ವಿಯಾದ ನಂತರ ಗ್ರಾಹಕರು ಪ್ರತಿಭನಟೆಯನ್ನು ಹಿಂಪಡೆದರು. ನೂರಾರು ಗ್ರಾಹಕರು ಸೇರಿದಂತೆ ವಿಭಾಗೀಯ ವ್ಯವಸ್ಥಾಪಕ ವಿಕಾಸ ಭಗೋತ್ರಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ ವಾಲಿ, ಶಿವಕುಮಾರ, ವೆಂಕಟೇಶ ರಾಜಪೂತ ಸೇರಿದಂತೆ ಮತ್ತಿತರರು ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬ್ಯಾಂಕ್ ಮುಂದುಗಡೆ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 