ಹೂವಿನ ಹಡಗಲಿ

ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಿ : ಪಿ ಎಸ್ ಐ ಮಣಿಕಂಠ ಕೆ ಎಚ್ ಅಭಿಮತ

ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಿ : ಪಿ ಎಸ್ ಐ ಮಣಿಕಂಠ ಕೆ ಎಚ್ ಅಭಿಮತ

ಲೋಕದರ್ಶನ ವರದಿ 

ಹೂವಿನ ಹಡಗಲಿ 12:   ಪಾಲಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಎಂದು ಪಿ ಎಸ್ ಐ ಮಣಿಕಂಠ ಕೆ ಎಚ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯ ಪ್ರಸಕ್ತ  ಸಾಲಿನ 15 ನೇ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.ಹಿಂದೆ ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಹೊಡೆದು ಬುದ್ಧಿ ಹೇಳಿ ಸರಿ ಮಾರ್ಗದಲ್ಲಿ ನಡೆಯಲು ಹೇಳುತ್ತಿದ್ದರು.ಇದೀಗ ಇಲ್ಲಎಂದರು.ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಸುರೇಶ ಅಂಗಡಿ ಥಾಮಸ್ ಆಲ್ವಾ ಎಡಿಸನ್ ಮದರ್ ತೆರೇಸಾ ಮೊದಲಾದ ಮಹನೀಯರ ನಡೆ ನುಡಿ ಮಕ್ಕಳು ಅನುಸರಿಸಿರಿ ಎಂದರು.ಪ್ರಾಚಾರ್ಯ ಪಾದರ್ ವಿಕ್ಟರ್ ವಿಜಯ್ ಪೈಸ್ 2025-26 ರ ಶಾಲಾ ವಾರ್ಷಿಕ ವರದಿ ವಾಚಿಸಿದರು. ಸಂಚಾಲಕ ಫಾದರ್ ಡೇಂಜಿಲ್ ವೇಗಸ್ ಮಾತನಾಡಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದು ಸಂಸ್ಥೆಯ ಮುಖ್ಯ ಧೋರಣೆ ಆಗಿದೆ ಎಂದು ತಿಳಿಸಿದರು.

ಪಟ್ಟಣ ಸಿ ಆರ್ ಪಿ ವೀರೇಶ ಬಗಲಿ ಮಾತನಾಡಿ ಸಂಸ್ಥೆ ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು ಎಂದು ತಿಳಿಸಿದರು. ಫಾದರ್ ಆರ್ಚಿಬಾಲ್ಡ ಗೋನ್ಸಾವಿಲ್ಸ ಕರ್ನಾಟಕ ಗೋವಾ ಪ್ರಾಂತ್ಯದ ಮೊದಲ ಪ್ರಾಂಥಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಹೆನ್ರಿ ಮೊರಾಸ್ ಸಿಸ್ಟರ್ ರೋಸಿಟಾ, ತಾನಿಯಾ ಫಾದರ್ ಪ್ರಕಾಶ್ ರೆಬೆಲ್ಲೊಫಾದರ್ ಲೀಪರ್ಡ್‌ ರೊನಾಲ್ಡ ಬ್ರದರ್ ಲಿಕ್ಸನ್ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಪತ್ರಕರ್ತ ಎಂ ದಯಾನಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾರ್ಮೆಲ್ ಶಾಲೆಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಶಿಕ್ಷಕರಾದ ಮಹಾಲಕ್ಷ್ಮಿ, ಪ್ರಕಾಶ್, ಅನಿಲ್, ಪ್ರಶಾಂತ್ ನಿರ್ವಹಿಸಿದರು. ಶಾಲೆಯ ವಿವಿಧ ತರಗತಿಗಳ ಮಕ್ಕಳು ಪ್ರದರ್ಶಿಸಿದ ಆಕರ್ಷಕ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. 


ಸುದ್ದಿ ಓದಿ