ಕ್ರಿಕೇಟ್ ಕ್ರೀಡಾಕೂಟದಿಂದ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ : ಜಗದೀಶ
Cricket tournaments can bring out talents: Jagadeesh
ಲೋಕದರ್ಶನ ವರದಿ
ಕ್ರಿಕೇಟ್ ಕ್ರೀಡಾಕೂಟದಿಂದ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ : ಜಗದೀಶ
ಕಂಪ್ಲಿ 13 : ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಕಂಪ್ಲಿ ತಾಲೂಕಿನಲ್ಲಿ ತಾಲೂಕು ಕ್ರೀಡಾಂಗಣವಾದರೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು. ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಸರಾ ಪ್ರಯುಕ್ತ ಹೈಸ್ಕೂಲ್ ಬಾಯ್ಸ್‌ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಗಂಡುಗಲಿ ಕುಮಾರರಾಮ ಪ್ರೀಮಿಯರ್ ಲೀಗ್ ಸೀಸನ್-1ರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಕಪ್ ವಿತರಿಸಿದ ನಂತರ ಮಾತನಾಡಿ, ಕ್ರಿಕೇಟ್ ಕ್ರೀಡಾಕೂಟದಿಂದ ಸಾಕಷ್ಟು ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ. ಕಂಪ್ಲಿ ತಾಲೂಕಿನಲ್ಲಿ ಕ್ರೀಡಾಂಗಣದ ಅವಶ್ಯಕತೆ ಇದ್ದು, ಮಾನ್ಯ ಶಾಸಕ ಗಣೇಶ ಅವರು ತಾಲೂಕು ಕ್ರೀಡಾಂಗಣ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಅನುವು ಮಾಡಿಕೊಡಬೇಕು. ಪ್ರಥಮ ಸ್ಥಾನ ಪಡೆದ ವಿಐಪಿ ತಂಡಕ್ಕೆ ಮಾನ್ಯ ಶಾಸಕ ಜೆ.ಎನ್.ಗಣೇಶ ಅವರ ನಿರ್ದೇಶನದಂತೆ 30 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಯಿತು ಎಂದರು. ಹೈಸ್ಕೂಲ್ ಬಾಯ್ಸ್ ಪ್ರಧಾನ ಕಾರ್ಯದರ್ಶಿ ಬಿ.ನೂರ್ ಮುಕ್ತಾರ್ ಮಾತನಾಡಿ, ಕಂಪ್ಲಿಯಲ್ಲಿ ಮೊದಲ ಬಾರಿಗೆ ಗಂಡುಗಲಿ ಕುಮಾರರಾಮ ಪ್ರೀಮಿಯರ್ ಲೀಗ್ ಸೀಸನ್-1ರ ಕ್ರಿಕೇಟ್ ಟೂರ್ನಿಮೆಂಟ್ ಯಶಸ್ವಿಯಾಗಿ ನಡೆದಿದೆ. ಮಾನ್ಯ ಶಾಸಕ ಗಣೇಶ ಅವರು ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನವನ್ನು ಜೆಎನ್ ನೆಟ್ ಗೋಪಾಲ ಇವರು ನೀಡಿದರು ಎಂದರು. ಪ್ರಥಮ ಸ್ಥಾನ ಪಡೆದ ವಿಐಪಿ ತಂಡವು ಸುಮಾರು 30 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನದ ಪಡೆದ ಮಾರ್ನೀಂಗ್ ಕ್ರಿಕೆಟ್ ತಂಡವು 15 ಸಾವಿರ ರೂ.ಗಳ ನಗದು ಬಹುಮಾನ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ ಮುಖಂಡರಾದ ಜೆಎನ್ ನೆಟ್ ಗೋಪಾಲ, ಕಂಪ್ಲಿ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಅಹ್ಮದ್, ಕರವೇ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಹೈಸ್ಕೂಲ್ ಬಾಯ್ಸ್ ಸಹ ಕಾರ್ಯದರ್ಶಿ ಉಮೇಶ, ಸಲಹೆಗಾರ ಎಸ್.ರಮೇಶ, ಮುಖಂಡರಾದ ಅಕ್ಕಿ ಜಿಲಾನ್, ಆಟೋ ರಾಘವೇಂದ್ರ, ಅಂದಾರೆಡ್ಡಿ, ನವೋದಯ ರಮೇಶ, ಬಸವಣ್ಣ, ಗೋಲ್ಡ್ ನಾಗರಾಜ, ಖಾಜಾ, ನೂರ್ ಬಾಗ್ಲಿ, ಡಿ.ಜಿ.ವಿಜಯ, ಮೂಕಿ(ತಿಪ್ಪೇಸ್ವಾಮಿ), ರಾಜ(ಎದುರು) ಸೇರಿದಂತೆ ಕ್ರೀಡಾಪಟುಗಳು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 