ನಗರದ 27 ನೇ ವಾರ್ಡಿನಲ್ಲಿ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ

ನಗರದ 27 ನೇ ವಾರ್ಡಿನಲ್ಲಿ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ Construction work of Sri Kedarlingeshwara Temple launched in Ward 27 of the city

ಲೋಕದರ್ಶನ ವರದಿ

ಗದಗ 07 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಕೆ.ಎಚ್‌.ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸರಕಾರದಿಂದ ಬಿಡುಗಡೆಯಾದ ಅನುದಾನದ ಅಡಿಯಲ್ಲಿ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನದ ನಿರ್ಮಾಣ ಕಾಮಗಾರಿಯನ್ನು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಸಮಾರಂಭದ ಉದ್ಘಾಟನೆಯನ್ನು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ .ಬಿ.ಬಿ ಅಸೂಟಿ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲ್, ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯಣೀಯರಾದ ಶ್ರೀಮತಿ ಲಲಿತಾ ಬ. ಅಸೂಟಿ ಇವರ ಸಹಭಾಗಿತ್ವದಲ್ಲಿ ಈ ಒಂದು ಅವಿಸ್ಮರಣೀಯ ಸಮಾರಂಭ ನೆರವೇರಿತು. 

ಈ ಸಂಧರ್ಭದಲ್ಲಿ ಬಡಾವಣೆಯ ಅಧ್ಯಕ್ಷರಾದ ಮಾಲಿಂಗಪ್ಪ ಬರಬರಿ. ಉಪಾಧ್ಯಕ್ಷರಾದ ಕಲ್ಮೇಶ್ ಆಲದಗಟ್ಟಿ. ಬಡಾವಣೆಯ ಮುಖಂಡರಾದ ಕೆ.ವಿ.ಹಿರೇಮಠ, ಹನುಮಂತ್ಪವಾರ, ಆದಪ್ಪ ಮಾರ​‍್ಪನವರ, ಸಿದ್ದರಾಮಯ್ಯ ಕಟ್ಟಿಗೆಹಳ್ಳಿಮಠ, ಮಂಜುನಾಥ ದೊಡ್ಡಮನಿ ಮಮ್ಮದಸಾಬ್ ವಾಲಿಕಾರ,  ಅಪ್ಪಾಸಾಬ ಮುಧೋಳ, ಕುಬೇರ ಗೌಡ ಪಾಟೀಲ, ಬಾಬುಸಾಬ ಶಿರಹಟ್ಟಿ,  ಆನಂದ ಇನಾಮತಿ, ಶಿವಪ್ಪ ಮೂಲಿಮನಿ, ಪ್ರಕಾಶ.ಖೋಡೆ, ಚಾಂದಸಾಬ ಕೊಟ್ಟುರ, ಬಸಪ್ಪ ಹಳ್ಳಿಗುಡಿ, ಕಳಕಪ್ಪ. ಮಡಿವಾಳರ, ಮುತ್ತು ಸುಂಕದ, ಶ್ರೀಮತಿ ರಾಜಬೀ ಬಳಗಾರ, ಶ್ರೀಮತಿ ಸರೋಜಾ ಬರಬರಿ,  ಅಂದಮ್ಮ ಹೊಟ್ಟಿನ, ಭೀಮಣ್ಣ ಮುಧೋಳ, ಶಿವಾನಂದ ಹೊಸಂಗಡಿ, ಈರಣ್ಣ ಹುಚ್ಚನಗೌಡ್ರ,  ಮಲ್ಲನಗೌಡ ಪಾಟೀಲ,  ವಿರೂಪಾಕ್ಷಪ್ಪ ಪೊಲೀಸ ಪಾಟೀಲ  ಹಾಗೂ ಸಮಸ್ತ ಬಡಾವಣೆಯ ಬಂಧು ಬಾಂಧವರು ಉಪಸ್ಥಿತರಿದ್ದರು.