ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ: ಪಾಲಬಾವಿ ಗ್ರಾಮದಲ್ಲಿ ದಿನಸಿ ಕಿಟ್ ಗಳನ್ನ ವಿತರಿಸಿ ಮಾತನಾಡಿದ ಸಿದ್ಧಾರ್ಥ ವಾಡೆನ್ನವರ
Serving the poor is like serving God: Siddhartha Wadden, who spoke after distributing grocery kits i
ಪಾಲಬಾವಿ 07 : ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು ದಾನ, ಪರೋಪಕಾರ, ಹಸಿದವರಿಗೆ ಅನ್ನ, ಕಷ್ಟದಲ್ಲಿ ಸಹಾಯ ಮಾಡುವುದೇ ದೇವರೇ ಸೇವೆ ಮಾಡಿದಂತೆ, ಅದಕ್ಕಾಗಿ ಬಡವರ ಸೇವೆ ಮಾಡಲು ನಾನು ಸಿದ್ಧನಾಗಿದ್ದೇನೆ. ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ನನಗೆ ಹಿರಿಯರು ಹೇಳಿದ್ದಾರೆಂದು ಉದ್ಯಮಿ ಸಮಾಜಸೇವಕ ಸಿದ್ಧಾರ್ಥ ವಾಡೆನ್ನವರ ಹೇಳಿದರು. ಅವರು ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಪಾಲಬಾವಿ ಗ್ರಾಮದ ಲಕ್ಷ್ಮಣ ಮೇತ್ರಿರವರ ಮನೆಯಂಗಳದಲ್ಲಿ ಹಮ್ಮಿಕೊಂಡ ಬಡವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡುತ್ತ ನಾನು ಕೂಡ ಬಡತನದಲ್ಲಿಯೇ ಹುಟ್ಟಿ ಬೆಳೆದವನು.
ಬಡತನದ ಕಷ್ಟ ಹೇಗೆ ಇರುತ್ತೆ ಎಂಬುದು ನನಗೆ ಗೊತ್ತು. ಈಗ ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಅದಕ್ಕಾಗಿ ನಾನು ಬಡವರ, ದುರ್ಬಲರ ಸೇವೆಯನ್ನು ಮಾಡಲು ಬಯಸಿದ್ದೇನೆ. ತಾವು ನನಗೆ ಅವಕಾಶ ಹಾಗೂ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡರು.ಶಿಕ್ಷಕ ಸಿರಾಜ್ ಬಿರಾದಾರ, ಕುಮಾರ ತೆಳಗಡೆ, ಶಿವಾಜಿ ಮೇತ್ರಿ ಮಾತನಾಡಿದರು. ವೇದಿಕೆ ಮೇಲೆ ಲಕ್ಷ್ಮಣ ಮೈತ್ರಿ, ಶಂಕರ ಮೇತ್ರಿ, ಶಿವಪ್ಪ ಮಾದರ, ಕುಮಾರ ತೆಳಗಡೆ, ಶಿವಲಿಂಗ ಕೌಜಲಗಿ, ಭೀಮಪ್ಪ ಜುಂಜರವಾಡ, ಪಿಕೆಪಿಎಸ್ ಸಂಘದ ನಿರ್ದೇಶಕ ಶಬ್ಬೀರ್ ಮುಜಾವರ, ಮುಸ್ತಾಕ್ ಮುಲ್ಲಾ, ಗಂಗಪ್ಪ ನಾವಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬರಮಪ್ಪ ಮಾದರ, ಬರಮಪ್ಪ ಬಡಚಿ, ರಾಮಪ್ಪ ಮಾದರ, ಮುತ್ತಪ್ಪ ಮದಾಳೆ, ಅಖಿಲೇಶ್ ಹುಕ್ಕೇರಿಕರ, ಅಮಿತ್ ಪಾಟೀಲ, ಶಾರುಖ್ ದೇಸಾಯಿ, ಮಹಿಳೆಯರಾದ ದುಂಡವ್ವ ಮೇತ್ರಿ, ಪಾರವ್ವ ವಡ್ರಾಳ, ನೀಲವ್ವ ಮಾದರ, ಮಂಜುಳಾ ಮಾದರ, ಬಂಗಾರೆವ್ವ ಮೇತ್ರಿ, ಯಮನವ್ವ ಮಾದರ, ನಾಗವ್ವ ಮುತ್ತಗಿ, ಸುಶಲವ್ವ ಮಾದರ, ಚಂದ್ರವ್ವ ನಾವಿ, ಸೊಬವ್ವ ಮಾದರ, ಸವಿತಾ ಭಂಡಾರಿ, ರೇಣುಕಾ ಮೇತ್ರಿ, ಚಂದ್ರವ್ವ ಅವಳೆ, ಪಾರವ್ವ ಕೆಳಗಡೆ, ಸುನಂದ ಮೇತ್ರಿ, ವಿದ್ಯಾಶ್ರೀ ಮಾದರ, ಲಕ್ಷ್ಮಿ ಮಾದರ, ರತ್ನವ್ವ ತೆಳಗಡೆ, ಅಣ್ಣವ್ವ ತೆಳಗಡೆ, ಶೈಲಾ ಮಾದರ, ರೂಪಾ ಮಾದರ, ಸರಸ್ವತಿ ಮಾದರ ಇತರರು ಇದ್ದರು. ಶಿವಾಜಿ ಮೇತ್ರಿ ಪ್ರಾಸ್ತಾಪವಾಗಿ ಮಾತನಾಡಿ ಸ್ವಾಗತಿಸಿದರು. ಕುಮಾರ ತೆಳಗಡೆ ನಿರೂಪಿಸಿದರು. ಸಿರಾಜ್ ಬಿರಾದಾರ ವಂದಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 