ಅಂಬೇಡ್ಕರ್ ಅವರ ಜೀವನದ ಪ್ರತಿಫಲನವೇ ಸಂವಿಧಾನ: ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 27: ಅಂಬೇಡ್ಕರ್ ಅವರ ಜೀವನದ ಪ್ರತಿಫಲನವೇ ಸಂವಿಧಾನ, ಹಾಗಾಗಿ ನಾವು ಸಂವಿಧಾನವನ್ನು ಓದುವುದರೊಂದಿಗೆ ಅಂಬೇಡ್ಕರ ಜೀವನವನ್ನು ಅರಿತುಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಪಿ.ಬಿ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಅಂಬೇಡ್ಕರ್ ಕನಸಿನ ಭಾರತ ವಿಚಾರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಈರಪ್ಪ ಸುತಾರ ಮಾತನಾಡಿ, ದೇಶದ ಜನರೆಲ್ಲರು ಸಾಮಾಜಿಕ ಸಮಾನತೆ ಹಾಗೂ ಆರ್ಥಿ ಕ ವಿಮೋಚನೆಯನ್ನು ಮಾಡಬೇಕೆಂಬ ಉದ್ದೇಶದಿಂದ ಅಂಬೇಡ್ಕರ ಅವರು ಸಂವಿಧಾನವನ್ನು ಬರೆದಿದ್ದು, ಎಲ್ಲರೂ ಅದನ್ನು ಗೌರವಿಸಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಅಗ್ನಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಮಾಳಿ, ಸಾಹಿತಿ ಚಿತ್ತರಂಜನ ನಾಂದ್ರೇಕರ ವೇದಿಕೆಯಲಿದ್ದರು. ಪ್ರಾಚಾರ್ಯ ಸುರೇಶ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಲಿಂಗಾನಂದ ಗವಿಮಠ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ.ವಿಮಲಾ ಬೊಮ್ಮನಹಳ್ಳಿ ವಂದಿಸಿದರು.ಉಪನ್ಯಾಸಕ ಸಿ.ಎಸ್.ಜನಗೊಂಡ ನಿರೂಪಿಸಿದರು.