ಜಮೀರ್ ಅಹ್ಮದ್ ಕಡೆಗಣಿಸಿದರೆ ಕಾಂಗ್ರೆಸ್ಗೆ ಭಾರಿ ರಾಜಕೀಯ ನಷ್ಟ ಫಿಕ್ಸ್: ಸವಿತಾ ಸಮಾಜ ಎಚ್ಚರಿಕೆ
Congress will face huge political loss if Zameer Ahmed is ignored: Savita Samaj warns
ಗದಗ 06: ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಹಿಂದುಳಿದ ಹಾಗೂ ಶೋಷಿತ ವರ್ಗಗಳ ಗಟ್ಟಿ ಧ್ವನಿಯಾಗಿರುವ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ದೂರ ಇಟ್ಟಿರುವುದು ಸ್ವಯಂಕೃತ ಅಪರಾಧವಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ಭಾರಿ ರಾಜಕೀಯ ನಷ್ಟ ಉಂಟಾಗುವುದು "ಶತಸಿದ್ಧ" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ಗೆ ಕಟು ಎಚ್ಚರಿಕೆಯ ಪತ್ರಿಕಾ ಹೇಳಿಕೆ ನೀಡಿರುವ ಅವರು ಜಮೀರ್ ಅಹ್ಮದ್ ಖಾನ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ರಾಜ್ಯದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಆಶಾಕಿರಣ. ಚಾಮರಾಜಪೇಟೆ ಕ್ಷೇತ್ರದಲ್ಲಿ ಕೇವಲ ಮುಸ್ಲಿಂ ಮತಗಳಿಂದ ಅವರು ಗೆಲ್ಲುತ್ತಿಲ್ಲ; ಸವಿತಾ ಸಮಾಜ ಸೇರಿದಂತೆ ಸಮಸ್ತ ಹಿಂದುಳಿದ ಜಾತಿಗಳ ಜನರು ಅವರ ಮೇಲಿಟ್ಟಿರುವ ಅಚಲ ನಂಬಿಕೆಯಿಂದಾಗಿ ಸತತವಾಗಿ ಗೆಲ್ಲಿಸುತ್ತಿದ್ದಾರೆ. ಇದನ್ನು ಹೈಕಮಾಂಡ್ ಮರೆಯಬಾರದು.
ಕೇವಲ ಸ್ವಕ್ಷೇತ್ರ ಅಷ್ಟೇ ಅಲ್ಲದೆ, ರಾಜ್ಯದ ಹತ್ತಾರು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಅದ್ಭುತ ಸಂಘಟನಾ ಶಕ್ತಿ ಜಮೀರ್ ಅಹ್ಮದ್ ಖಾನ್ ಅವರಿಗಿದೆ. ಇಂತಹ ಜನಪ್ರಿಯ ನಾಯಕನ ವರ್ಚಸ್ಸನ್ನು ಸಹಿಸದ ಕೆಲವು ಶಕ್ತಿಗಳು, ದಾವಣಗೆರೆ ಉಪಚುನಾವಣೆಯ ಸುಳ್ಳು ಆಡಿಯೋ ಮುಂದಿಟ್ಟುಕೊಂಡು ಸಚಿವ ಸ್ಥಾನದಿಂದ ದೂರ ಇಟ್ಟಿರುವುದು ವ್ಯವಸ್ಥಿತ ರಾಜಕೀಯ ಷಡ್ಯಂತ್ರವಾಗಿದೆ ಎಂದರಲ್ಲದೆ ಬಡವರು, ರೈತರು, ಶೋಷಿತರು ಕಷ್ಟದಲ್ಲಿದ್ದಾಗ ಸರ್ಕಾರಕ್ಕಿಂತ ಮುಂಚಿತವಾಗಿ ವೈಯಕ್ತಿಕ ಹಣದಿಂದ ಕೋಟ್ಯಂತರ ರೂಪಾಯಿ ಸಹಾಯ ಮಾಡಿದ ಮಾನವತಾವಾದಿ ಜಮೀರ್ ಅಹ್ಮದ್ ಖಾನ್. ಇಂತಹ ಜನನಾಯಕನನ್ನು ಮೂಲೆಗುಂಪು ಮಾಡಿರುವುದು ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಅಲ್ಲ, ಸವಿತಾ ಸಮಾಜದಂತಹ ಅತ್ಯಂತ ಹಿಂದುಳಿದ ವರ್ಗಗಳಿಗೂ ಉಂಟುಮಾಡಿರುವ ಭಾರಿ ಆಘಾತ ಮತ್ತು ನೋವಾಗಿದೆ.
ಆಡಿಯೋ ವಿವಾದದ ಕುರಿತು ಯಾವುದೇ ತನಿಖೆ ನಡೆದರೂ ನಮ್ಮ ಅಭ್ಯಂತರವಿಲ್ಲ. ಸತ್ಯ ಹೊರಬರಲಿ. ಆದರೆ, ತನಿಖೆಯನ್ನೇ ಬಂಡವಾಳ ಮಾಡಿಕೊಂಡು ಶಕ್ತಿವಂತ ನಾಯಕನನ್ನು ರಾಜಕೀಯವಾಗಿ ಮುಗಿಸಲು ಹೊರಟರೆ ಶೋಷಿತ ಸಮಾಜಗಳು ಸುಮ್ಮನೆ ಕೂರುವುದಿಲ್ಲ. ಜಮೀರ್ ಅಹ್ಮದ್ ಖಾನ್ ಅವರನ್ನು ತಕ್ಷಣವೇ ಗೌರವಯುತವಾಗಿ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸೂಕ್ತ ಸ್ಥಾನಮಾನ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ಹಿಂದುಳಿದ ಹಾಗೂ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿವೆ. ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಕೃಷ್ಣಾ ಎಚ್. ಹಡಪದ ಅವರು ಭವಿಷ್ಯ ನುಡಿದಿದ್ದಾರೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 