ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಇಲ್ಲ ; ಸಚಿವ ಆನಂದಸಿಂಗ್ ಟೀಕೆ: 13ರಂದು ಹೂವಿನ ಹಡಗಲಿಯಲ್ಲಿ ಜನ ಸಂಕಲ್ಪ ಯಾತ್ರೆ
ಲೋಕದರ್ಶನ ವರದಿ
ಲೋಕದರ್ಶನ ವರದಿ
ಹೂವಿನಹಡಗಲಿ 10: ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಕಳೆದುಕೊಂಡು ಯೋಜನೆ, ಗೊತ್ತು ಗುರಿ ಇಲ್ಲದೇ ಜೋಡು ಯಾತ್ರೆ ಕೈಗೊಂಡಿದೆ ಎಂದು ಪ್ರವಾಸೋಧ್ಯಮ ಸಚಿವ ಆನಂದಸಿಂಗ್ ಆರೋಪಿಸಿದರು.
ಪಟ್ಟಣದ ದಾಕ್ಷಿಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
13ರಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಿ.ಎಂ.ಬಸವರಾಜಬೊಮ್ಮಾಯಿ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರ್ಪ ನೇತೃತ್ವದಲ್ಲಿ ಸಂಕಲ್ಪಯಾತ್ರೆ ಉದ್ಘಾಟನೆ ನಡೆಯಲಿದ್ದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸರ್ಕಾರ ಮೀಸಲಾತಿ ಕುರಿತು ಮಹತ್ವ ನಿರ್ಧಾರ ಕೈಗೊಂಡಿದ್ದು, ಪರಿಶಿಷ್ಟ ಜಾತಿ ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡ ಶೇ.3ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ಸಚಿವ ಶ್ರೀರಾಮುಲು ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ ಎಂದರು.
ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ವಿಭಾಗಿಯ ಸಿದ್ದೇಶ ಯಾದವ, ಚಂದ್ರಶೇಖರ ಪಾಟೀಲ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಮಂಡಲ ಅಧ್ಯಕ್ಷ ಸಂಜೀವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಚಂದ್ರನಾಯ್ಕ, ವಿಭಾಗಿಯ ಪ್ರಧಾನ ಕಾರ್ಯದರ್ಶಿ ಹೆಚ್.ಪೂಜಪ್ಪ, ಜಿಲ್ಲಾ ಉಪಾಧ್ಯಕ್ಷ ಪಿ.ವಿಜಯಕುಮಾರ, ಒಬಿಸಿ ಜಿಲ್ಲಾಧ್ಯಕ್ಷ ಈಟಿ.ಲಿಂಗರಾಜ, ಕಾರ್ಯದರ್ಶಿಗಳಾದ ರಾಘು, ರಾಮೇಶ, ಎಂ.ಬಿ.ಬಸವರಾಜ, ಮುಖಂಡರಾದ ಓದೋಗಂಗಪ್ಪ, ರಾಮನಾಯ್ಕ, ಸುರೇಶ ಶಿವಪುರ, ಸಿರಾಜ್ ಬಾವಿಹಳ್ಳಿ, ಗುರುಸಿದ್ದಪ್ಪ,ಎಲ್.ಕೆ.ರವಿಕುಮಾರ ನಾಯ್ಕ ಶಿವಪುರ,ಉಚ್ಚಂಗೆಪ್ಪ, ಪರಶುರಾಮ, ಐನಳ್ಳಿ ಭಾಗ್ಯಮ್ಮ, ಮೀರಾಬಾಯಿ, ಲಲಿತಾಬಾಯಿ ಇದ್ದರು.