ಹೂವಿನ ಹಡಗಲಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿ ಉಚಿತ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿ ಉಚಿತ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.03 : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಒಂದರೆ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಂದು ಕುಟುಂಬದ ಸದಸ್ಯನಿಗೆ ತಲಾ 10 ಅಕ್ಕಿ ನೀಡುವ ಭರವಸೆಯನ್ನು ವಿರೋಧ ಪಕ್ಷದ ನಾಯಕ ಮಾಜಿ ಸಿ.ಎಂ. ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಮಾಲವಿ ಜಲಾಶಯಕ್ಕೆ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನದಿಂದ ತುಂಬಿದ್ದಕ್ಕಾಗಿ ಏರ್ಪಡಿಸಿದ್ದ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ನಮ್ಮ ಸಕರ್ಾರ ಅಧಿಕಾರದಲ್ಲಿದ್ದಾಗ ಇಲ್ಲಿನ ಶಾಸಕ ಎಸ್.ಭೀಮಾನಾಯ್ಕ್ ಜೆಡಿಎಸ್ ಪಕ್ಷದಿಂದ ಗೆದ್ದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ದುಂಬಾಲು ಬಿದ್ದು ಅನುದಾನ ಗಿಟ್ಟಿಸಿಕೊಂಡರು, ರಾಜ್ಯದ ಚುಕ್ಕಾಣಿ ಯಾವುದೇ ಪಕ್ಷದ ಹಿಡಿತದಲ್ಲಿರಲಿ ಆದರೆ ಮುಖ್ಯಮಂತ್ರಿಯಾದವರು ಯಾವುದೇ ಪಕ್ಷ ತಾರತಮ್ಯ ಮಾಡದೇ ಸರ್ವತೋಮುಖ ಅಭಿವೃಧ್ಧಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಾಗ ನೀಡಿದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ ಜೊತೆಗೆ ಹೇಳದಿರುವ 30 ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ನೀಡಿದೆ, ಬಿಜೆಪಿ ಪಕ್ಷ ಗುತ್ತಿಗೆ ದಾರರಿಗೆ ಕಿರುಕುಳ ನೀಡಿ ಸಾವಿನ ಮನೆಗೆ ತಳ್ಳಿದೆ ಅದನ್ನು ಪ್ರಶ್ನಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ ಜೈಲುಪಾಲು ಮಾಡಿದ್ದಾರೆ, ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ತಾಕತ್ತಿದ್ದರೆ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ ಹೇಳಲಿ ಡಬಲ್ ಇಂಜಿನ್ ಸಕರ್ಾರವಿದ್ದರೂ ಕಾಂಗ್ರೇಸ್ ಪಕ್ಷದ ಹಲವಾರು ಯೋಜನೆಗಳಿಗೆ ಕತ್ತರಿ ಹಾಕಿದೆ, ಒಂದೇ ವೇದಿಕೆಯಲ್ಲಿ ಸಿ.ಎಂ ಒಂದರೆ ಸತ್ಯ ಸುಳ್ಳು ಸಾಬೀತು ಪಡಿಸುವೆ, ಬಿಜೆಪಿ ಪಕ್ಷವು ಸುಳ್ಳುಗಳನ್ನು ಸಿದ್ದಪಡಿಸುವ ಫ್ಯಾಕ್ಟರಿಯಾಗಿದೆ, ರಾಜ್ಯದಿಂದ 25ಎಂ.ಪಿ.ಗಳನ್ನು ಕಳಿಸಿದ್ದೀರಿ 15ನೇ ಹಣಕಾಸು ಆಯೋಗದ ಪ್ರಕಾರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 5495 ಕೋಟಿ ತಡೆಹಿಡಿದಿದ್ದಾರೂ ಎಕೆ ಎಂಬುದಕ್ಕೆ ಸಮಂಜಸ ಉತ್ತರವಿಲ್ಲದೇ ಪಿ.ಎಂ. ಮೋದಿ ಅವರ ಮುಂದೆ ನಿಮ್ಮ ತಾಕತ್ತು ಕುಂದುತ್ತದೆ ಎಂದು ಕಿಡಿಕಾರಿದರು.ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ  ಭೀಮಾನಾಯ್ಕ್ನನ್ನು ಆಶಿರ್ವದಿಸುವಂತೆ ಮನವಿ ಮಾಡಿಕೊಂಡರು.

ಪ್ರಾಸ್ತಾವಿಕವಗಿ ಶಾಸಕ ಎಸ್.ಭಿಮಾನಾಯ್ಕ್ ಮಾತನಾಡಿ ಈ ಭಾಗದ ಮಾಲವಿ ಜಲಾಶಯಕ್ಕೆ ನೀರು ತರುವುದಾಗಿ ಹಲವು ನಾಯಕರು ಭರವಸೆ ನೀಡಿದರು ನಮ್ಮ ಕಾಂಗ್ರೇಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಿದ್ದಾರೆ.ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಸಿ.ಟಿ.ರವಿ ಅವರು ಲೋಟಿ ರವಿಯಾಗಿದ್ದಾರೆ ಕ್ಷೇತ್ರದಲ್ಲಿ 2000ಕೋಟಿಗೂ  ಹೆಚ್ಚು ಅನುದಾನ ನೀಡಿ ಪಕ್ಷ ತಾರತಮ್ಮ ಮಾಡದೇ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ನಡೆಸಲು ಸದಾ ಜೊತೆಯಾಗಿದ್ದಾರೆ ಎಂದರು.

ಚಾಮರಾಜ ಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ , ಮಾಜಿ ಶಾಸಕ ಶಿರಾಜ್ ಶೇಖ್, ಮಾಜಿ ಸಂಚಿವ ಸಮತೋಷ್ ಲಾಡ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು.ರುದ್ರಪ್ಪ ಲಮಾಣಿ, ಅಮರೇಗೌಡ ಭಯ್ಯಪುರ, ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ಇ.ತುಕಾರಾಂ ಕೆಪಿಸಿಸಿ ಸದಸ್ಯ ಕುರಿ ಶಿವಮೂತರ್ಿ ಸೇರಿದಂತೆ ಇನ್ನು ಮುಂತಾದವರು ಇದ್ದರು. ಮಾಲವಿ ಜಲಾಶಯಕ್ಕೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಬಾಗೀನ ಅರ್ಪಿಸಿದರು.


ಸುದ್ದಿ ಓದಿ