ಕಾಂಗ್ರೆಸ್ ಬಜೆಟ್: ರಾಜ್ಯದ ಮೇಲೆ ಸಾಲದ ಹೊರೆ
ಲೋಕದರ್ಶನ ವರದಿ
ಹೂವಿನಹಡಗಲಿ 7: "ರಾಜ್ಯಕ್ಕೆ ಈಗ ?7.50 ಲಕ್ಷ ಕೋಟಿ ಸಾಲ ಇದೆ. ಅದರಲ್ಲಿ ?5 ಲಕ್ಷ ಕೋಟಿ ಸಾಲ ಮಾಡಿರುವವರು ಸಿದ್ದರಾಮಯ್ಯ. ಅವರಿಗಿಂತಲೂ ಉತ್ತಮ ಹಣಕಾಸು ಸಚಿವರು ನಮ್ಮಲ್ಲಿ ಆಗಿ ಹೋಗಿದ್ದಾರೆ. ಅವರನ್ನೆಲ್ಲ ಇವರು ಯಾವ ರೀತಿಯಲ್ಲಿ ಮೀರಿಸಿದ್ದಾರೆ ? ಸಾಲ ಮಾಡಿ ಉಚಿತವಾಗಿ ಕೊಡುವುದು ಎಷ್ಟು ಸರಿ ? ಇದೇನಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ತಜ್ಞತೆ ? ಎಂದು ವಿಜಯನಗರ ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ಬಸವಾಜ ವಾಗ್ದಾಳಿ ನಡೆಸಿದರು.ರಾಜ್ಯದ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ರಾಜ್ಯದ 7.50 ಲಕ್ಷ ಕೋಟಿ ಸಾಲ ಇಟ್ಟುಕೊಂಡು ?4 ಲಕ್ಷ ಕೋಟಿ ಬಜೆಟ್ ಕೊಡುವುದು ಯಾವ ಸೀಮೆಯ ಬಜೆಟ್ ಎಂದು ಪ್ರಶ್ನಿಸಿದರು ?.
ಜನರಿಗೆ ಮದ್ಯ ಕುಡಿಸಿ ಆ ಪಾಪದ ಹಣ ?45 ಸಾವಿರ ಕೋಟಿಯಲ್ಲಿ ಉಚಿತ ಕೊಡುಗೆ ಗ್ಯಾರಂಟಿ ಗಳನ್ನು ಕೊಡುತ್ತಿದ್ದೀರಿ . ಪತಿಗೆ ಹೆಂಡ ಕುಡಿಸುವುದು ಅದರಲ್ಲಿ ಬರುವ ಹಣವನ್ನೇ ಪತ್ನಿಗೆ ಕೊಡುವುದು. ನಾಚಿಕೆಗೇಡಲ್ಲವೇ ? ಎಂದು ಕೇಳಿದರು. ಇದರ ಬದಲಾಗಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ವನ್ನು ಉಚಿತವಾಗಿ ಕೊಡಿ ಎಂದು ಎಂ.ಬಿ.ಬಸವರಾಜ ಕೇಳಿದರು. ರಾಜ್ಯದ ಬಜೆಟ್ ನಲ್ಲಿ ಜನಪರ, ರೈತ ಪರವಾಗಿರುತ್ತದೆ ಎಂಬ ನೀರೀಕ್ಷೆ ಹುಸಿಯಾಗಿದೆ. ಯಾವ ವರ್ಗಕ್ಕೂ ನಯಾಪೈಸೆ ಲಾಭವಿಲ್ಲದ ನಿರಾಶಾದಾಯಕ ಬಜೆಟ್ ಆಗಿದೆ. ಕಾಂಗ್ರೆಸ್ ಸರ್ಕಾರದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್ನಿಂದ ಅನುಕೂಲವಾಗಿಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.