ಇಂದಿನಿಂದ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ

ಇಂದಿನಿಂದ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ Commemoration week of Shri Madhavananda Prabhuji from today

ಶಿವಾಪೂರ(ಹ): ಸಮೀಪದ ಮುನ್ಯಾಳ  ಗ್ರಾಮದ  ಮಾಧವಾನಂದ ನಗರದ ಇಂಚಗೇರಿ ಶಾಖಾ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರಾಂತಿಯೋಗಿ ಸದ್ಗುರು  ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ ಹಾಗೂ ಸಮುದಾಯ ಭವನದ ಉದ್ಘಾಟನ ಕಾರ್ಯಕ್ರಮ ಇಂದಿನಿಂದ ಎರಡು ದಿನಗಳ ಕಾಲ ಜರುಗಲಿದೆ.ದಿವ್ಯ ಸಾನಿಧ್ಯ ಮತ್ತು ಅಧ್ಯಕ್ಷತೆಯನ್ನು  ಇಂಚಗೇರಿ ಮಠದ ಪೀಠಾಧಿಪತಿಗಳಾದ  ರೇವಣಸಿದ್ದೇಶ್ವರ ಮಹಾರಾಜರು ವಹಿಸುವರು,ಸಾನಿಧ್ಯ ಡಾ.ಮ. ಘ.ಚ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು  ಸದಾಶಿವ ಯೋಗೀಸ್ವರ ಮಠ  ಮುನ್ಯಾಳ ,ಉದ್ಘಾಟಕರಾಗಿ ಅರಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಆಗಮಿಸುವರು ,ಕಾರ್ಯಕ್ರಮದ ನಿಮಿತ್ಯವಾಗಿ ವಿವಿಧ ಧಾರ್ಮಿಕ  ಹಾಗೂ  ಮಾಧವಾನಂದ ಪ್ರಭುಜಿ ನಾಟ್ಯ ಸಂಘ ಮುನ್ಯಾಳ  ಇವರ ವತಿಯಿಂದ ರೈತ ಮನೆತನ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿದ್ದಾರೆ.