ಕುಸಿದ ಮನೆಯ ಗೋಡೆ: ಅಪಾಯದಿಂದ ಬಾಣತಿ ಪಾರು
Collapsed house wall: Nursing mother escapes
ಆಲಮೇಲ 19: ತಾಲೂಕಿನ ಕಡಣಿ ಭೌರಮ್ಮ ಬೀರಪ್ಪ ಪೂಜಾರಿ ಎಂಬುವರ ಮನೆ ಮಳೆಯಿಂದ ಮಧ್ಯರಾತ್ರಿ 12 ಗಂಟೆಗೆ ಗೋಡೆ ಕುಸಿದು ಬಿದ್ದಿದೆ. ಮನೆಯ ಒಳಗೆ ಹೊರಸಿನ ಮೇಲೆ ಮಲಗಿಕೊಂಡಿದ್ದ ಬಾಣಂತಿ ಕಾಲ ಮೇಲೆ ಚವಣಿ ಬಿದ್ದಿರುವುದು ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಭೌರಮ್ಮ ಪೂಜಾರಿ, ಯಲ್ಲಪ್ಪ ಪೂಜಾರಿ, ಕಾವೇರಿ, ಅಂಜಲಿ, ಅಮೃತ ಮಕ್ಕಳು ಮಲಗಿದ್ದೆವು, ಜಿಟಿ ಜಿಟಿ ಮಳೆಯಿಂದ ಗೋಡೆ ಕುಸಿಯಿತು. ದೇವರು ದೊಡ್ಡವನು ಜೀವಕ್ಕೆ ಅಪಾಯವಾಗಿಲ್ಲವೆಂದು ಭೌರಮ್ಮ ಹೇಳಿದಳು.
ರಾತ್ರಿ 12 ಗಂಟೆಗೆ ಚೀರುವ ಸೌಂಡ್ ಕೇಳಿ ಓಡಿ ಹೋಗಿ ನೋಡಿದಾಗ ಮನೆಯ ಗೋಡೆ ಅವರ ಕಾಲುಗಳ ಮೇಲೆ ಬಿದ್ದಿರುವುದು ಕಂಡು ಭಯವಾಗಿತ್ತು. ಹಿರಿಯರಾದ ಗುರಣ್ಣ ಕಳಸಗೊಂಡ ಹೇಳಿದರು.
ಇದು ಒಂದು ಭಯಾನಕ ದೃಶ್ಯವಾಗಿದೆ. ಗೋಡೆ ಕಡೆ ತೆಲಿಯ ಮಾಡಿ ಮಲಗಿದರೆ ಅವರ ಜೀವಕ್ಕೆ ಅಪಾಯವಿತ್ತು. ದೇವರ ಆಶೀರ್ವಾದದಿಂದ ಯಾವುದೇ ಜೀವಕ್ಕೆ ಅಪಾಯವಾಗಿಲ್ಲ. ಸಾಧ್ಯ ಆದಷ್ಟು ಸರಕಾರದಿಂದ ಪರಿಹಾರ ನೀಡುತ್ತೇನೆ ಎಂದು ಹೇಳಿದರು.
ಧನಪಾಲ ಶೆಟ್ಟಿ
ಆಲಮೇಲ ದಂಡಾಧಿಕಾರಿಗಳು.
ಧಾರಾಕಾರ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆವಾಗುತ್ತಿದೆ. ಮಣ್ಣಿನ ಮನೆಗಳು ಇರುವುದರಿಂದ ಗೋಡೆ ಕುಸಿಯುತ್ತವೆ ದೇವರ ದಯದಿಂದ ಯಾವುದೇ ಅಪಾಯವಾಗಿಲ್ಲ.
ಡಾ. ಮಲ್ಲು ಪ್ಯಾಟಿ
ಗ್ಯಾರಂಟಿ ಯೋಜನೆಗಳ ಸದಸ್ಯರು ಕಡಣಿ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 