ತುಳುನಾಡು ಜನರಿಗೆ ವಿಷು ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ
ಬೆಂಗಳೂರು, ಏ.14,ಸೌರ ಸಂವತ್ಸರ,' 'ಸ್ಥಿರ ಸಂವತ್ಸರ' ಎಂದು ಕರೆಯಲಾಗುವ 'ವಿಷು' ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ತುಳು ಭಾಷೆಯಲ್ಲಿ ಟ್ವೀಟ್ ಮಾಡಿರುವ ಅವರು, ಬಿಸುತ ದಿನ ಪೊಸತ್ ಮನಸ್ ಪೊಸತ್ ಕನಸ್ ಪೊಸತ್ ತೆನಸ್ ಮಾತಲಾ ಪೊಸತ್ ಪೊಸತ್ ಆವಡ್ ಪೊಸ ವರ್ಷೊಡು ಪರತ್ ಮಹಾಮಾರಿ ದೂರ ಅದ್ ಸುಖ ಸಂತೋಸ ನೆಲೆಸಡ್ ಮಾತೆರೆಗ್ ಬಿಸುತ ಸುಭಾಸುಯೊಲು ಎಂದು ತಿಳಿಸಿದ್ದಾರೆ.ಹೊಸ ವರ್ಷದಲ್ಲಿ ಮಹಾಮಾರಿ ಕೋವಿಡ್ ದೂರವಾಗಿ ಎಲ್ಲೆಡೆ ಸಂತೋಷ, ನೆಮ್ಮದಿ ನೆಲೆಸಲಿ, ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತುಳು ಭಾಷೆಯಲ್ಲಿ ಶುಭ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 