ಚಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ಸಿ. ದ್ಯಾಮಪ್ಪ ಆಯ್ಕೆ
ಹೂವಿನಹಡಗಲಿ, ಆ.12: ಚಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ಸಿ. ದ್ಯಾಮಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಸಿ. ಅಜ್ಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಿ. ದ್ಯಾಮಪ್ಪ ಅಧ್ಯಕ್ಷರಾಗಿ, ಹಡಗಲಿ ಹೊನ್ನಪ್ಪ ಮೈಲಾರ ಗೌರವ ಅಧ್ಯಕ್ಷರಾಗಿ, ಸಿ. ಹಾಲೇಶ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ವಿರೂಪಾಕ್ಷಪ್ಪ, ಚಂದ್ರ್ಪ, ಪರಶುರಾಮ ಹಾಗೂ ಅಜ್ಜಯ್ಯ ಉಪಾಧ್ಯಕ್ಷರಾಗಿ, ಸಿ. ವೀರೇಶ ಖಜಾಂಚಿಯಾಗಿ, ಸಿ. ಹಾಲೇಶ ಸಂಘಟನಾ ಕಾರ್ಯದರ್ಶಿಯಾಗಿ, ರಮೇಶ ಕಾರ್ಯದರ್ಶಿಯಾಗಿ ಹಾಗೂ ಕರಿಬಸಪ್ಪ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಅಂಜಿನಪ್ಪ ದಾಸರ ಮಕರಬ್ಬಿ ಅವರನ್ನು ಕಾನೂನು ಸಲಹೆಗಾರರಾಗಿ, ಕೇಶವಣ್ಣ ಹಡಗಲಿ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಈರಣ್ಣ ಮತ್ತು ಮಹೇಶ ಅವರನ್ನು ಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾ ಪ್ರಕಟಣೆ ತಿಳಿಸಿದೆ. ಜಿಲ್ಲಾ ಸಮಿತಿ ಮುಖಂಡರಾದ ಸಿ. ಕೆಂಚಪ್ಪ ಮತ್ತಿಹಳ್ಳಿ ಹಾಗೂ ಸಿ. ಕೆಂಗರಾಜ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.