ಜಮಖಂಡಿ

ಮಕ್ಕಳಿಗೆ ಮೆದುಳು ಜ್ವರ ಚುಚ್ಚುಮದ್ದು ಮಕ್ಕಳು ಅಸ್ತವ್ಯಸ್ಥ

ಮಕ್ಕಳಿಗೆ ಮೆದುಳು ಜ್ವರ ಚುಚ್ಚುಮದ್ದು ಮಕ್ಕಳು ಅಸ್ತವ್ಯಸ್ಥ

ಜಮಖಂಡಿ 08: ತಾಲೂಕಿನ ತೊದಲಬಾಗಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ಮೂವರು ಮಕ್ಕಳು ಮೆದುಳು ಜ್ವರ ಚುಚ್ಚುಮದ್ದು ಹಾಕಿಸಿಕೊಂಡಿದ್ದಕೆ ವಾಂತಿ-ಭೇದಿ, ಕಂಡು ಬಂದಿದ್ದು, ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರಗೆ ದಾಖಲಿಸಿದ ಘಟನೆ ಸಂಭವಿಸಿದೆ. 

ತಾಲೂಕಿನ ಗೋಠೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕಾರ್ಯಕರ್ತೆಯರು ಬುಧವಾರ ಮಧ್ಯಾಹ್ನ ವಸತಿ ಶಾಲೆಯ ಸುಮಾರು 250 ಕ್ಕೂ ಹೆಚ್ಚು ಮಕ್ಕಳಿಗೆ ಮೆದುಳು ಜ್ವರ ಚುಚ್ಚುಮದ್ದು ಹಾಕಿದ್ದು, ಅದರಲ್ಲಿ 9 ನೇ ತರಗತಿಯ ಅಮೃತಾ ತಾಂಬೋಳೆ, 6 ನೇ ವರ್ಗದ ಸಮೃದ್ದಿ ರಾವಳ,ಅಶ್ವನಿ ಗೋಠೆ ಈ ವಿದ್ಯಾರ್ಥಿನಿಯರು ಚುಚ್ಚುಮದ್ದು ಹಾಕಿಸಿ ಕೊಂಡ ನಂತರ ಹೊಟ್ಟೆ ನೋವು,ವಾಂತಿ ಪ್ರಾರಂಭವಾಗಿದ್ದು,ತಕ್ಷಣ ಅವರನ್ನು ಜಮಖಂಡಿ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ವಿದ್ಯಾರ್ಥಿನಿಯರಲ್ಲಿ ಚೇತರಿಜೆ ಕಂಡು ಬಂದಿದೆ. 

ಭಯ ಬೇಡ- 

ಗೋಠೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯದ್ಯಾಧಿಕಾರಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಆಸ್ಪತ್ರೆಯಿಂದ ಸುಮಾರು 1500 ಕ್ಕೂ ಹೆಚ್ಚು ಮಕ್ಕಳಿಗೆ ಮೆದುಳು ಜ್ವರ ಚುಚ್ಚುಮದ್ದು ಹಾಕಲಾಗಿದ್ದು, ಕೆಲ ವಿದ್ಯಾರ್ಥಿಗಳು ಅಶಕ್ತವಿದ್ದ ಕಾರಣ ಕೆಲವು ವೇಳೆ ವಾಂತಿ,ಭೇದಿ ಬರುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು, ಪಾಲಕರು ಭಯಪಡುವ ಅವಶ್ಯಕತೆವಿಲ್ಲವೆಂದು ಡಾ.ವಡಗಾಂವಕರ ತಿಳಿಸಿದರು. 

ಎ,ಬಿ, ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿನಿಯರು, 


ಸುದ್ದಿ ಓದಿ