ಹೂವಿನ ಹಡಗಲಿ

163 ಮಕ್ಕಳಿಗೆ ಪುಸ್ತಕ ಬ್ಯಾಗ್ ಸ್ವೆಟರ್ ವಿತರಣೆ

163 ಮಕ್ಕಳಿಗೆ ಪುಸ್ತಕ ಬ್ಯಾಗ್ ಸ್ವೆಟರ್ ವಿತರಣೆ

ಹೂವಿನ ಹಡಗಲಿ 30:  ಮಕ್ಕಳು ಹೆಚ್ಚು ಓದಿ ಉತ್ತಮ ಸಾಧನೆ ಮಾಡಿರಿ ಎಂದು ಎಂ ಎಂ ಪಾಟೀಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ದಾಸರಹಳ್ಳಿ ಸತೀಶ್ ಹೇಳಿದರು.ತಾಲೂಕಿನ ದಾಸರಹಳ್ಳಿ ಹಾಗೂ ಕೊಂಬಳಿ ನವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 162 ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಂಡರ್ ಲಾ ಸಂಸ್ಥೆಯ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೆಗೆ ಪೂರಕವಾದ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಿ ಅವರು ಮಾತನಾಡಿದರು.ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಯಶಸ್ಸು ಗಳಿಸಿದ್ದಾರೆ. ಹಳ್ಳಿಗಳಲ್ಲಿ ಪಾಲಕ ಪೋಷಕರು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಗ್ರಾಮೀಣ ಪ್ರದೇಶದ ಬಡ ಮಧ್ಯಮ ವರ್ಗದ ಕುಟುಂಬದವರ ಮಕ್ಕಳ ಆರ್ಥಿಕ ಸ್ಥಿತಿ ಅರಿತು ನಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಒದಗಿಸುವ ಕಾರ್ಯ ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ರುದ್ರೇಶ್ ತಿಳಿಸಿದರು.ಸಂಸ್ಥೆಯ ಎಚ್ ಆರ್ ಎಜಿಮ್ ಮಹೇಶ್ ಪಾಟೀಲ್ ಮಾತನಾಡಿ ಮಕ್ಕಳು ಎಲ್ಲಾ ವಿಷಯಗಳ ಬಗ್ಗೆ ಕುತೂಹಲ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಕೃಷ್ಣ ದಾಸರಹಳ್ಳಿ ದಾಸರಹಳ್ಳಿನಿರಂತರ ಓದಿನಿಂದ ಬೌದ್ಧಿಕ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.ಉಭಯ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು (ಲೇಖನಿ) ಸ್ಕೂಲ್ ಬ್ಯಾಗ್ ಹಾಗೂ ಸ್ವೆಟರ್ (ಬೆಚ್ಚಗಿನ ಉಡುಪು) ಗಳನ್ನು ವಿತರಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸ್ವಾಮ್ಯಾ ನಾಯ್ಕಶಾಲೆಯ ಮುಖ್ಯ ಗುರುಗಳಾದ ಕೃಷ್ಣನಾಯ್ಕ, ಸಿದ್ದಮ್ಮ,ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ ಜಗದೀಶ್ ಎಸ್ ಡಿ ಎಂ ಸಿ ಅಧ್ಯಕ್ಷಕೃಷ್ಣ ನಾಯ್ಕ್‌, ಶಿಕ್ಷಕರಾದ ಚಂದ್ರಕಾಂತ ಮರೋಳ, ರಾಜಶೇಖರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ